ಮೇಷ
ಇಂದು ನೀವು ಬಾಕಿ ಉಳಿದಿರುವ ಕಾರ್ಯ ಪೂರೈಸಲು ಗಮನ ಕೊಡಬೇಕು. ಧನಾಗಮನ. ಆರೋಗ್ಯದಲ್ಲಿ ಸುಧಾರಣೆ.ಸಂತೋಷ.
ವೃಷಭ
ಇಂದು ಹಿನ್ನಡೆ ಅನುಭವಿಸುವಿರಿ. ಕೆಲಸಗಳು ನೀವಂದುಕೊಂಡಂತೆ ನಡೆಯುವುದಿಲ್ಲ. ಶೇರು ವ್ಯವಹಾರದಲ್ಲಿ ಹಣ ಹೂಡಿಕೆ ತರವಲ್ಲ.
ಮಿಥುನ
ಅದೃಷ್ಟ ನಿಮಗಿದೆ. ಕಾರ್ಯದಲ್ಲಿ ಯಶಸ್ಸು. ಬಾಕಿ ಉಳಿದ ಕೆಲಸ ಪೂರ್ಣ ಗೊಳ್ಳುವುದು. ನವವಿವಾಹಿತರಿಗೆ ಶುಭಸುದ್ಧಿ .
ಕಟಕ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಸಂಘರ್ಷ ಬರದಂತೆ ನೋಡಿಕೊಳ್ಳಿ. ಸಮತೋಲನ ಕಾಯ್ದು ಕೊಳ್ಳಿ. ಬಂಧುಗಳ ಹಿತ ಕಾಪಾಡಿ.
ಸಿಂಹ
ಉತ್ಸಾಹಪೂರ್ಣ ದಿನ. ಆತ್ಮೀಯರೊಂದಿಗೆ ಕಾಲಹರಣ. ಉದ್ಯೋಗದಲ್ಲಿ ನಿರೀಕ್ಷಿತ ಬೆಳವಣಿಗೆ. ಸಾಧಿಸಬೇಕೆಂದು ಬಯಸಿದ ಕಾರ್ಯ ಸಫಲ.
ಕನ್ಯಾ
ಪ್ರೀತಿ ವಿಷಯದಲ್ಲಿ ಸವಾಲಿನ ದಿನ. ಕಷ್ಟದ ಸ್ಥಿತಿ ಎದುರಿಸುವಿರಿ. ಭಿನ್ನಾಭಿಪ್ರಾಯ. ಆರ್ಥಿಕವಾಗಿ ಉನ್ನತಿ ಪಡೆಯುವಿರಿ.
ತುಲಾ
ಕೆಲಸದ ಕ್ಷೇತ್ರ ಮತ್ತು ಮನೆಯಲ್ಲಿ ಅನಪೇಕ್ಷಿತ ಪ್ರಸಂಗ ಎದುರಿಸುವಿರಿ. ಮಾನಸಿಕ ದೃಢತೆ ಕಾಯ್ದುಕೊಳ್ಳಬೇಕು. ತಪ್ಪು ನಿರ್ಧಾರ ತಾಳದಿರಿ.
ವೃಶ್ಚಿಕ
ನಿಮ್ಮ ಕಾರ್ಯದಲ್ಲಿನ ಸಫಲತೆಗಾಗಿ ಇತರರಿಂದ ಮೆಚ್ಚುಗೆ. ಹೆಚ್ಚು ಭಾವನಾ ತ್ಮಕ ಸನ್ನಿವೇಶದಲ್ಲಿ ಸಿಲುಕುವಿರಿ. ಕೌಟುಂಬಿಕ ಉದ್ವಿಗ್ನತೆ.
ಧನು
ಕೆಲಸದಲ್ಲಿ ಪ್ರಗತಿ. ಖಾಸಗಿ ಜೀವನದಲ್ಲಿ ನಿರಾಶೆ. ಆರ್ಥಿಕ ಸ್ಥಿತಿ ಮತ್ತು ಪ್ರೀತಿಯ ವಿಷಯದಲ್ಲಿ ಹಿನ್ನಡೆ ಅನುಭವಿಸುವಿರಿ.
ಮಕರ
ಅನೇಕ ಕೆಲಸದ ಒತ್ತಡ. ಕಾಲಮಿತಿಯೊಳಗೆ ಪೂರೈಸಬೇಕಾದ ಪರಿಸ್ಥಿತಿ. ನಿರೀಕ್ಷಿತ ನೆರವು ದೊರಕುವುದಿಲ್ಲ. ನೀವೋಬ್ಬರೆ ಏಗಬೇಕಾಗುವುದು.
ಕುಂಭ
ಕೆಲಸದಲ್ಲಿನ ಹೊಣೆಗಾರಿಕೆ ಹೆಚ್ಚಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಆರ್ಥಿಕ ಪರಿಸ್ಥಿತಿ ಸುಧಾರಣೆ.
ಮೀನ
ಪ್ರೀತಿಯ ವಿಷಯದಲ್ಲಿ ಮಹತ್ವದ ದಿನ. ಪ್ರಮುಖ ಬೆಳವಣಿಗೆ ಸಂಭವಿಸುವುದು. ಆರ್ಥಿಕ ಸಂಕಷ್ಟಗಳು ಪರಿಹಾರ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ