ಕರ್ನಾಟಕದಾದ್ಯಂತ ಬಿಸಿಲು ಮುಂದುವರೆದಿದೆ. ಒಂದಷ್ಟು ಜಿಲ್ಲೆಗಳಲ್ಲಿ ಬಿಸಿಲು ಝಳ ಹೆಚ್ಚಾಗಿದ್ದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಇನ್ನೂ ಚಳಿ ಮುಮದುವರೆದಿದೆ.
ಕಲಬುರಗಿಯಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಪ್ರಮಾಣದ ಚಳಿ ಮುಂದುವರೆದಿದೆ. ಬೆಳಗಿನ ಜಾವ ಚಳಿ ಇದ್ದರೂ ಬಿಸಿಲ ಝಳವೂ ತೀವ್ರವಾಗಿದೆ. ಮೈಸೂರು ಹಾಗೂ ಚಾಮರಾಜನಗರದಲ್ಲಿ 12.1 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.