ಮೇಷ
ನೀವಿಂದು ಉತ್ಸಾಹ ಕಳೆದುಕೊಳ್ಳುವಿರಿ.ಅದಕ್ಕೆ ವೃತ್ತಿಯ ಕಾರಣ ಅಥವಾ ಖಾಸಗಿ ಕಾರಣ ಇರಬಹುದು. ಕೌಟುಂಬಿಕ ಬೆಂಬಲ ದೊರಕಲಿದೆ
ವೃಷಭ
ನಿಮ್ಮ ಹೊಸ ಚಿಂತನೆಗೆ ಮಾನ್ಯತೆ ದೊರಕುವುದು. ಬಯಸಿದ ಕಾರ್ಯ ಸುಲಭದಲ್ಲಿ ಅನುಷ್ಠಾನ. ಖರ್ಚು ಮಾತ್ರ ಇಂದು ಅಧಿಕವಾಗಲಿದೆ.
ಮಿಥುನ
ಇತರರ ದೌರ್ಬಲ್ಯ ನಿಮಗೆ ಚೆನ್ನಾಗಿ ಗೊತ್ತು.ಅವರನ್ನು ಅರಿತುಕೊಳ್ಳಲು ಇದು ಸಹಾಯಕವಾಗಲಿದೆ.ಆತ್ಮೀಯರಿಗೆ ಹಣದ ನೆರವು ಬೇಕಾದೀತು.
ಕಟಕ
ದೈನಂದಿನ ವ್ಯವಹಾರದಲ್ಲಿ ಇಂದು ಆಸಕ್ತಿ ಕಡಿಮೆ. ಉನ್ನತ ವಿಷಯವೊಂದು ಮನ ಆವರಿಸುತ್ತದೆ.ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಸಿಂಹ
ಕೌಟುಂಬಿಕ ಬಿಕ್ಕಟ್ಟು ಕಾಡಬಹುದು. ಅದನ್ನು ಬದಿಗಿಟ್ಟು ನಿಮ್ಮ ವೃತ್ತಿ ಕೆಲಸವನ್ನು ಮಾಡಿ. ಕೆಲವು ವ್ಯಕ್ತಿಗಳು ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸುತ್ತಾರೆ.
ಕನ್ಯಾ
ಪ್ರೀತಿಯ ವಿಷಯದಲ್ಲಿ ಹೆಚ್ಚು ವ್ಯಸ್ತರಾಗುವಿರಿ. ನಿಮ್ಮ ಕಾರ್ಯವೆಲ್ಲ ಇದೇ ವಿಷಯಕ್ಕೆ ಸಂಬಂಧಿಸಿರುತ್ತದೆ. ಹಣದ ವಿಚಾರದಲ್ಲಿ ಎಚ್ಚರ ವಹಿಸಿರಿ.
ತುಲಾ
ಸಮಯವಿಂದು ವೇಗವಾಗಿ ಸಾಗುವುದು. ಅದಕ್ಕೆ ಕಾರಣ ನಿಮ್ಮ ಸಂತೋಷದ ಮನಸ್ಥಿತಿ. ಪ್ರೀತಿಪಾತ್ರರ ಸಂಗ ಉತ್ಸಾಹ ತುಂಬುವುದು. ಧನ ವೃದ್ಧಿ.
ವೃಶ್ಚಿಕ
ನಿಮ್ಮ ವೃತ್ತಿ ಕಾರ್ಯವು ಇಂದು ಮುಖ್ಯವಾಗಲಿದೆ.ಹಾಗಾಗಿ ಕೌಟುಂಬಿಕ ವಿಷಯ ಬದಿಗೆ ಸರಿಸಲ್ಪಡಲಿದೆ. ಖರ್ಚು ಹೆಚ್ಚಳ.
ಧನು
ಸಂತೋಷದ ಮನಸ್ಥಿತಿ. ಮನೆಯಲ್ಲಿ ಕುಶಿಯ ವಾತಾವರಣ. ನಿಮ್ಮ ನಿರೀಕ್ಷೆಗೆ ವಿರುದ್ಧವಾಗಿ ಕೆಲವರು ವರ್ತಿಸಬಹುದು. ತಾಳ್ಮೆಯಿರಲಿ.
ಮಕರ
ಸಂಬಂಧವನ್ನು ಜತನದಿಂದ ಕಾಯ್ದುಕೊಳ್ಳಿ. ಸಣ್ಣ ವಿಷಯ ಬಂಧುತ್ವ ಹಾಳು ಮಾಡಲು ಅವಕಾಶ ಕೊಡದಿರಿ.ಹೊಂದಾಣಿಕೆ ಮುಖ್ಯ.
ಕುಂಭ
ಪ್ರಯಾಣದ ಉದ್ದೇಶ ಸಫಲವಾಗಲಿದೆ. ಕೌಟುಂಬಿಕ ಉದ್ವಿಗ್ನತೆ ಶಮನ ಕಾಣುವುದು. ಎಲ್ಲರ ಜತೆ ಹೊಂದಾಣಿಕೆ ಸಾಧಿಸಿಕೊಂಡು ಬಾಳುವುದೊಳಿತು.
ಮೀನ
ನೀವು ಮಾಡಬೇಕಾದ ಕಾರ್ಯ ಸುಲಭದಲ್ಲಿ ನಡೆಯದು. ಆದರೆ ಹಠ ಬಿಡಬೇಡಿ. ಅಂತಿಮ ಗೆಲುವು ನಿಮ್ಮದೇ. ಖರ್ಚಿನತ್ತ ಗಮನ ಕೊಡಿ.