ದಿನಭವಿಷ್ಯ: ಮಂಗಳ-ಶುಕ್ರ ಸಂಯೋಗ ಈ ರಾಶಿಯವರಿಗೆ ಧನ ಲಾಭ

ಮೇಷ
ನಿರಾಳವಾಗಿ ದಿನ ಕಳೆಯುವ ಉದ್ದೇಶ ನಿಮ್ಮದಾದರೂ ಕೆಲವು ಕಾರ್ಯಭಾರಗಳು ಅದಕ್ಕೆ ಅವಕಾಶ ಕೊಡುವುದಿಲ್ಲ. ದಿನವಿಡೀ ಬಿಝಿ.

ವೃಷಭ
ನಿಮ್ಮ ಕಾರ್ಯದಲ್ಲಿ ಪ್ರಬಲ ಪ್ರತಿಸ್ಪರ್ಧೆ ಎದುರಿಸುವಿರಿ. ಸಂಗಾತಿಯ ಮನೋಭಾವ ಅರ್ಥ ಮಾಡಿಕೊಳ್ಳಿರಿ. ಖರ್ಚು ನಿಯಂತ್ರಿಸಿ.

ಮಿಥುನ
ಆದಾಯ ಮತ್ತು ಖರ್ಚಿನ ಮಧ್ಯೆ ಸಮನ್ವಯ ಸಾಧಿಸಿ. ಖರ್ಚು ಹೆಚ್ಚದಂತೆ ನೋಡಿಕೊಳ್ಳಿ. ಬಂಧುಗಳ ಭೇಟಿ ಸಂತಸ ತರುವುದು.

ಕಟಕ
ನೀವಿಂದು ಸಮಸ್ಯೆ ಎದುರಿಸಿದರೆ  ನೆರವಿಗೆ ಬಂಧುಗಳು, ಕುಟುಂಬಸ್ಥರು ಸಿದ್ಧರಿರುತ್ತಾರೆ. ಹಾಗಾಗಿ ಸವಾಲು ಎದುರಿಸಲು ಹಿಂಜರಿಕೆ ಬೇಕಿಲ್ಲ.

ಸಿಂಹ
ಆರೋಗ್ಯದ ಕಡೆ ಗಮನ ಕೊಡಿ. ಹೊಟ್ಟೆಗೆ ಹಾನಿಕರವಾದ ಆಹಾರ ಸೇವಿಸದಿರಿ. ಹಿರಿಯರ ಸಲಹೆಗೆ ಕಿವಿಗೊಡಿ. ಬಂಧುಗಳ ಅನಿರೀಕ್ಷಿತ ಭೇಟಿ ಸಂಭವ.

ಕನ್ಯಾ
ಅಪರಾಹ್ನದ ನಂತರ ನಿಮ್ಮ ಮನಸ್ಥಿತಿ ಉತ್ತೇಜಿಸುವ ಸುದ್ದಿ ಕೇಳುವಿರಿ. ಬೆಳಗಿನ ಬೇಸರ ಮರೆಯುವಿರಿ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ತುಲಾ
ಫಲಪ್ರದ ದಿನ. ಸ್ಫೂರ್ತಿ ಹೆಚ್ಚು. ಕಾರ್ಯದಲ್ಲಿ ಸಫಲತೆ. ಈವರೆಗೆ ಫಲ ನೀಡದಿದ್ದ ಕಾರ್ಯ ಇಂದು ಸಫಲತೆ ಕಾಣುವುದು. ಬಂಧುಗಳ ಭೇಟಿ.

ವೃಶ್ಚಿಕ
ಇಂದು ಉದಾಸೀನತೆ ಕಾಡಲಿದೆ. ಹಾಗಾಗಿ ಯಾವುದೇ ಕಾರ್ಯದಲ್ಲಿ ನಿರಾಸಕ್ತಿ. ಆರೋಗ್ಯದ ವಿಷಯ ಬಂದಾಗ ವೈದ್ಯರನ್ನು ಕಾಣಲು ಮರೆಯದಿರಿ.

ಧನು
ಜೀವನಶೈಲಿಯಲ್ಲಿ ನಿಮ್ಮ ಬದುಕಿಗೆ ಪೂರಕವಾಗುವ ಬದಲಾವಣೆಯನ್ನು ಮಾಡಿಕೊಳ್ಳಿ. ಆಪ್ತರ ಸಂಗದಲ್ಲಿ ಸಂತೋಷ ಕಾಣುವಿರಿ.

ಮಕರ
ನಿಮ್ಮ ಹಿಂದಿನ ಪ್ರಯತ್ನಗಳ ಫಲ ಇಂದು ಸಿಗಲಿದೆ. ಖರ್ಚನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಸಂಗಾತಿಯಿಂದ ಭಾವನಾತ್ಮಕ ಬೆಂಬಲ ಸಿಗಲಿದೆ.

ಕುಂಭ
ಕೆಲ ದಿನಗಳ ಕೋಲಾಹಲದ ಬಳಿಕ ಇಂದು ಎಲ್ಲವೂ ಶಾಂತವಾಗುವುದು. ಆತ್ಮೀಯರಿಂದ ಭಾವನಾತ್ಮಕ ಬೆಂಬಲ ಪಡೆಯುವಿರಿ.

ಮೀನ
ಪ್ರೀತಿಯ ವಿಷಯದಲ್ಲಿ ಭಾವನಾತ್ಮಕ ಬ್ಲಾಕ್‌ಮೇಲ್ ಫಲ ನೀಡದು.ಅಂತಹ ಪ್ರಯತ್ನಕ್ಕೆ ಕೈ ಹಾಕದಿರಿ.  ನಿರಾಶೆ ಉಂಟಾದರೂ ಸಹಿಸಿಕೊಳ್ಳಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!