ದಿನಭವಿಷ್ಯ: ಮಿಶ್ರ ಫಲ, ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸು

ಮೇಷ
ಕೆಲಸದಲ್ಲಿ ಶಿಸ್ತು ಅವಶ್ಯ. ಇಲ್ಲವಾದರೆ ಗೊಂದಲ ಸೃಷ್ಟಿಯಾದೀತು. ವೃತ್ತಿಯಲ್ಲಿ  ಮನಸ್ತಾಪ ಸಂಭವ. ವಾಗ್ವಾದದಿಂದ ದೂರವಿರಿ. ರೇಗಾಡಲು ಹೋಗದಿರಿ.

ವೃಷಭ
ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯವೂ ಮುಖ್ಯ. ಸಣ್ಣ ವಿಷಯಕ್ಕೆ ಮನಸ್ಸು ಕೆಡಿಸಿಕೊಳ್ಳದಿರಿ. ಶಾಂತಚಿತ್ತತೆ ಇರಲಿ. ಎಲ್ಲರ ಜತೆ ಹೊಂದಾಣಿಕೆ ಸಾಧಿಸಿರಿ.

ಮಿಥುನ
ಮುಖ್ಯ ವಿಚಾರದಲ್ಲಿ ಕೆಲವರ ಜತೆ ಭಿನ್ನಮತ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯಬೇಡಿ. ಸಮಾಧಾನಚಿತ್ತ ಮುಖ್ಯ.

ಕಟಕ
ಹೊಸ ವ್ಯವಹಾರದಲ್ಲಿ ಹೂಡಿಕೆಯಿಂದ ಲಾಭ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ. ಆರೋಗ್ಯ ಸುಸ್ಥಿರ.

ಸಿಂಹ
ಸಂಘರ್ಷವನ್ನು  ಸಮಾಧಾನದಿಂದ ನಿಭಾಯಿಸಿ. ಕೋಪ, ಅಸಹನೆ ಫಲ ನೀಡದು. ಕೌಟುಂಬಿಕ ಪರಿಸರ ಸಮಾಧಾನಕರ. ಆರ್ಥಿಕ ಪರಿಸ್ಥಿತಿ ಸುಧಾರಣೆ.

ಕನ್ಯಾ
ಆರೋಗ್ಯಪೂರ್ಣ ಆಹಾರ ಸೇವಿಸಿ. ಇಲ್ಲವಾದರೆ ಸ್ವಾಸ್ಥ್ಯ  ಕೆಡಬಹುದು. ಕುಟುಂಬ ಸದಸ್ಯರ ಆದರಾತಿಥ್ಯ ಮನಸ್ಸಿಗೆ ನಿರಾಳತೆ ತರುವುದು.

ತುಲಾ
ವೃತ್ತಿಯಲ್ಲಿ, ಹಿರಿಯರ ಎದುರು ವಿನಯದಿಂದ ನಡಕೊಳ್ಳಿ. ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯಿರಿ. ಅವರಿಗೆ ನಿಮ್ಮ ಕಾಳಜಿಯ ಅಗತ್ಯ ಬೀಳಲಿದೆ.

ವೃಶ್ಚಿಕ
ವೃತ್ತಿಯಲ್ಲಿ ನಿಮ್ಮ ಗುರಿ ಸಾಧಿಸುವಿರಿ. ಗ್ರಹಗತಿ ನಿಮಗೆ ಪೂರಕ ಆಗಿರುವುದರಿಂದ ಅದರ ಸಂಪೂರ್ಣ ಲಾಭ ಪಡೆಯಿರಿ. ಆರ್ಥಿಕ ಲಾಭವೂ ಸಿಗಲಿದೆ.

ಧನು
ನಿಮ್ಮ ಕೆಲಸವನ್ನು ಇತರರ ಜತೆ ಹಂಚಿಕೊಳ್ಳುವುದು ಮುಖ್ಯ. ಅದರಿಂದ ಸುಲಭವಾಗಿ ಗುರಿ ಸಾಧಿಸಬಲ್ಲಿರಿ. ಆರ್ಥಿಕ ಬಿಕ್ಕಟ್ಟು ಸಂಭವ.

ಮಕರ
ಕುಟುಂಬ ಸದಸ್ಯರ ಜತೆ ನಿಮ್ಮ ಭಾವನೆ ಹಂಚಿಕೊಳ್ಳಿ. ಅವರೇ ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವವರು. ಕೆಲಸದಲ್ಲಿ ಪ್ರಮಾದ ಎಸಗದಿರಿ.

ಕುಂಭ
ಸಮಯಕ್ಕೆ ಸರಿಯಾಗಿ ಕಾರ್ಯ ಮುಗಿಯದು. ನಿಮ್ಮ ಗ್ರಹಗತಿಯೇ ಇಂದು ಹಾಗಿದೆ. ಎಲ್ಲ ಕೆಲಸದಲ್ಲಿ ವಿಳಂಬ. ಕೌಟುಂಬಿಕ ಶಾಂತಿ ಸಮಾಧಾನ ತರುವುದು.

ಮೀನ
ಬಂಧುಗಳ ಜತೆ  ಮಾತಿನ ಚಕಮಕಿ ತಪ್ಪಿಸಿ. ಕ್ಷುಲ್ಲಕ ವಿಷಯ ಕಡೆಗಣಿಸಿ. ಆರ್ಥಿಕ ಒತ್ತಡ ಹೆಚ್ಚಲಿದೆ. ಆರೋಗ್ಯದ ಕಡೆ ಗಮನ ಹರಿಸಿರಿ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!