ಸೋಮವಾರ, ೨೩ ಸೆಪ್ಟೆಂಬರ್ ೨೦೨೪
ಮೇಷ
ಸಣ್ಣ ಸಣ್ಣ ವಿಷಯಕ್ಕೂ ಗಮನ ಕೊಡಿ. ಕೆಲವೊಮ್ಮೆ ಅವೇ ದೊಡ್ಡ ಪರಿಣಾಮ ಬೀರುವವು. ಕ್ಷುಲ್ಲಕ ಸಮಸ್ಯೆ ದೊಡ್ಡದಾಗಬಹುದು. ಆರ್ಥಿಕ ಒತ್ತಡ.
ವೃಷಭ
ಎಂದಿನಂತಲ್ಲದ ದಿನ. ಖಾಸಗಿ ಬದುಕಿನಲ್ಲಿ ಖುಷಿ ಅರಳಿಸುವ ಬೆಳವಣಿಗೆ. ವೃತ್ತಿಯಲ್ಲೂ ಸಫಲತೆ. ದಿನದಂತ್ಯಕ್ಕೆ ನಿಮಗೆ ತೃಪ್ತಿಕರ ಭಾವ. ನಿರಾಳತೆ.
ಮಿಥುನ
ಎಲ್ಲರೂ ನಿಮ್ಮನ್ನು ಮೆಚ್ಚಬೇಕೆಂಬ ಭಾವನೆ ಬಿಟ್ಟುಬಿಡಿ. ಕೆಲವರು ನಿಷ್ಟುರರಾಗುವುದರಿಂದ ನಿಮಗೆ ನಷ್ಟವೇನೂ ಇಲ್ಲ. ನಿಮ್ಮ ಸ್ವಾಭಿಮಾನ ಬಿಡಬೇಡಿ.
ಕಟಕ
ಸುದೀರ್ಘ ಸಂಬಂಧ ವೊಂದು ಬಿರುಕು ಬಿಡುವ ಸಾಧ್ಯತೆ ತಲೆದೋರೀತು. ಅದನ್ನು ತಪ್ಪಿಸಲು ಪ್ರಯತ್ನಿಸಿ. ಕೆಲ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಿರಿ.
ಸಿಂಹ
ಈ ದಿನ ಕ್ಲಿಷ್ಟಕರ ಪರಿಸ್ಥಿತಿ ತಂದೊಡ್ಡುವುದು. ಅದನ್ನು ಕೌಶಲದಿಂದ ನಿಭಾಯಿಸಬೇಕು. ಭಾವನಾತ್ಮಕ ನಿಯಂತ್ರಣ ಅವಶ್ಯ. ಅತಿರೇಕದ ಪ್ರತಿಕ್ರಿಯೆ ಬೇಡ.
ಕನ್ಯಾ
ವೃತ್ತಿಯಲ್ಲಿ ನಿಮಗೆ ಅರಿವಿಲ್ಲದೇ ಕೆಲವು ಬೆಳವಣಿಗೆಗಳು ಸಂಭವಿಸುತ್ತಿವೆ. ಅವುಗಳ ಕುರಿತು ಗಮನ ಹರಿಸಿ. ಈ ಕುರಿತು ಅಜ್ಞಾನ ಪ್ರತಿಕೂಲವಾದೀತು.
ತುಲಾ
ಖಾಸಗಿ ಬದುಕಲ್ಲಿ ಮಹತ್ವದ ನಿರ್ಧಾರ ತಾಳಬೇಕಾದ ಪ್ರಸಂಗ ಒದಗೀತು. ಆತ್ಮೀಯ ಸಂಬಂಧದ ಮೇಲೆ ಇದು ಪರಿಣಾಮ ಬೀರುವುದು.
ವೃಶ್ಚಿಕ
ಹೆಚ್ಚಿನ ಹೊಣೆಗಾರಿಕೆ. ಆದರೆ ಅದನ್ನು ಕಾಟಾಚಾರಕ್ಕೆ ನಿಭಾಯಿಸಬೇಡಿ. ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ. ಅದರಿಂದ ಸಫಲತೆ.
ಧನು
ಕೌಟುಂಬಿಕ ಸ್ಥಿರತೆಗೆ ಆದ್ಯತೆ ಕೊಡಿ. ಎಲ್ಲರೊಡನೆ ಹೊಂದಾಣಿಕೆಯಿಂದ ವರ್ತಿಸಿ. ಸಣ್ಣ ವಿಷಯಗಳು ಬಿರುಕಿಗೆ ಕಾರಣವಾಗದಿರಲಿ.
ಮಕರ
ಪ್ರೀತಿಗೆ ಸಂಬಂಧಿಸಿ ಕೆಲವು ಅಹಿತಕರ ಬೆಳವಣಿಗೆ. ಅದನ್ನು ಸಂಯಮದಿಂದ ನಿಭಾಯಿಸಿ. ಆತುರದ ಕ್ರಮ ದುಷ್ಪರಿಣಾಮ ಬೀರೀತು.
ಕುಂಭ
ಕೆಲವು ಸಣ್ಣ ವಿಷಯ ಗಳಿಗೆ ನಿಮ್ಮ ಅತಿರೇಕದ ಪ್ರತಿಕ್ರಿಯೆಯು ಸಂಬಂಧ ಕೆಡಿಸ ಬಹುದು. ತಾಳ್ಮೆಯಿಂದ ವ್ಯವಹರಿಸುವುದು ಒಳ್ಳೆಯದು.
ಮೀನ
ಜಗತ್ತಿನಲ್ಲಿ ಎಲ್ಲರೂ ಭೌತಿಕ ವಿಷಯಕ್ಕೆ ಮಹತ್ವ ಕೊಡುತ್ತಾರೆ. ಈ ಕಹಿಸತ್ಯ ಇಂದು ಅರಿವಾದೀತು. ಇದು ನಿಮ್ಮನ್ನು ಆಧ್ಯಾತ್ಮದತ್ತ ಸೆಳೆಯಬಹುದು.