ದಿನಭವಿಷ್ಯ : ಉದ್ಯೋಗಸ್ಥರಿಂದ ಹೊಸ ಅವಕಾಶ, ಕೌಟುಂಬಿಕ ವೈಮನಸ್ಯ ಮುಕ್ತಾಯ

ಮೇಷ
ಇತರರಿಗೆ ನೆರವು ನೀಡುವುದು ಒಳ್ಳೆಯದೆ. ಆದರೆ ನಿಮ್ಮ ಸಾಮರ್ಥ್ಯ ಮೀರಿ ನೆರವು ನೀಡದಿರಿ. ಅದರಿಂದ ನಿಮಗೇ ಹಾನಿ. ಕೆಲಸದಲ್ಲಿ ನಿಧಾನ ಪ್ರಗತಿ.

ವೃಷಭ
ಸಹನೆ, ಸಮಾಧಾನದ ಮನಸ್ಥಿತಿ ಇಂದು ಅವಶ್ಯ. ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ಇತರರ ವ್ಯವಹಾರದಲ್ಲಿ ಅನವಶ್ಯ ಕುತೂಹಲ ತೋರದಿರಿ. ನಿಮ್ಮಷ್ಟಕ್ಕೇ ಇರಿ.

ಮಿಥುನ
ಯಾವುದೇ ಗಂಭೀರ ಕಾರ್ಯಕ್ಕೆಳಸದೆ ವಿರಾಮವಾಗಿ ಕಳೆಯುವುದು ನಿಮ್ಮ ಉದ್ದೇಶ. ಆಪ್ತರ ಸಂಗದಲ್ಲಿ  ದಿನ ಕಳೆಯುವ ಅವಕಾಶ.

ಕಟಕ
ವೃತ್ತಿಯಲ್ಲಿ, ಪ್ರೀತಿಯ ವಿಷಯದಲ್ಲಿ  ಕುಶಲತೆ, ಹೊಂದಾಣಿಕೆ ಇಂದಿನ ಆವಶ್ಯಕತೆ. ಭಾವನೆ ನಿಮ್ಮ ನಿಯಂತ್ರಣ ತಪ್ಪಬಹುದು. ಕೆಲಸದಲ್ಲಿ  ಏಕಾಗ್ರತೆಯಿರಲಿ.

ಸಿಂಹ
ನಿಮ್ಮ ಗುರಿ ಸಾಧಿಸದಂತೆ  ಯಾರೋ  ಅಡ್ಡಿ ತರುತ್ತಿದ್ದಾರೆ ಎಂಬ ಭಾವನೆ ನಿಮ್ಮದು. ನಿಮ್ಮ ಆತ್ಮವಿಶ್ವಾಸದ ಕೊರತೆ ಇದಕ್ಕೆ ಕಾರಣ. ದೃಢ ಮನಸ್ಸು ಅವಶ್ಯ.

ಕನ್ಯಾ
ಮನೆಯಲ್ಲೇ ಕೂರದೆ  ಹೊರಗೆ ಇಳಿಯಿರಿ. ದೈಹಿಕ ಶ್ರಮ ಬಯಸುವ ಕೆಲಸ ಮಾಡಿರಿ. ಇದುವೇ ನಿಮ್ಮ ದೈಹಿಕ ಆಲಸ್ಯಕ್ಕೆ ಸರಿಯಾದ ಔಷಧಿ, ತಿಳಿಯಿರಿ.

ತುಲಾ
ಆತ್ಮೀಯರ ಜತೆ ದಿನ ಕಳೆಯುವ ಉದ್ದೇಶ ನಿಮ್ಮದಾದರೂ ಕೆಲಸದ ಒತ್ತಡ ಅದಕ್ಕೆ ಅವಕಾಶ ನೀಡದು. ಆರ್ಥಿಕ ಒತ್ತಡವೂ ನಿಮ್ಮನ್ನು ಕಾಡುವುದು.

ವೃಶ್ಚಿಕ
ಸದಾ ಕೆಲಸದಲ್ಲಿ ನಿರತರಾಗಿ ಮೋಜು ಮಾಡುವ ಅವಕಾಶ ಕಳಕೊಂಡಿದ್ದೀರಿ. ಕೆಲಸದ ಒತ್ತಡ ಬದಿಗಿಟ್ಟು ಸಂತೋಷ ಆಚರಿಸಲು ಸಿದ್ಧರಾಗಿ.

ಧನು
ಫಲಪ್ರದ ದಿನ. ಬಹುಕಾಲದ ಉದ್ದೇಶವೊಂದು ಇಂದು ಈಡೇರಲಿದೆ. ಆಪ್ತ ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ. ಆರ್ಥಿಕ ಪ್ರಗತಿ.

ಮಕರ
ಕ್ಷಣಿಕ ಸಂತೋಷದ ಮೋಹಕ್ಕೆ ಒಳಗಾಗದಿರಿ.  ಅದು ಬಳಿಕ ನಿಮಗೆ ಪ್ರತಿಕೂಲವೇ ಆದೀತು. ಕುಟುಂಬದ ಇತರರ ಹಿತಾಸಕ್ತಿಗೆ ಕೂಡಾ ಗಮನ ಕೊಡಿ.

ಮೀನ
ನಿಮಗೇನು ಬೇಕು ಎಂಬುದರ ಬಗ್ಗೆ ನಿಮಗೇ ಸ್ಪಷ್ಟತೆ ಇಲ್ಲ. ಮೊದಲು ಇಂತಹ ಗೊಂದಲವನ್ನು ಪರಿಹರಿಸಿಕೊಳ್ಳಿ. ಉದ್ದೇಶ ಸ್ಪಷ್ಟವಿರಲಿ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!