ಮೇಷ
ವೃತ್ತಿಯಲ್ಲಿ ಯಶಸ್ವಿ ದಿನ. ವ್ಯವಹಾರ ವೃದ್ಧಿ. ಉದ್ದೇಶ ಈಡೇರಿಕೆ. ಕೌಟುಂಬಿಕ ಬದುಕು ಸಮಾಧಾನಕರ. ಪ್ರೀತಿಪಾತ್ರರ ಮನಸ್ಸು ಗೆಲ್ಲುವಿರಿ.
ವೃಷಭ
ಕುಟುಂಬ ಸದಸ್ಯರ ಬೇಡಿಕೆಗಳಿಗೆ ಆದ್ಯತೆ ಕೊಡಬೇಕಾಗುವುದು. ಬಂಧುಗಳ ಸಹಕಾರ ನಿರೀಕ್ಷಿಸಬೇಡಿ. ಕಠಿಣ ಕಾರ್ಯ ಸುಲಭವಾಗಿ ನೆರವೇರುತ್ತದೆ.
ಮಿಥುನ
ಕೆಲಸದಲ್ಲಿ ಕಠಿಣ ಸವಾಲು ಎದುರಿಸುವಿರಿ. ನಿಮ್ಮ ಆತ್ಮವಿಶ್ವಾಸ
ಕಳಕೊಳ್ಳದಿರಿ. ಅಂತಿಮವಾಗಿ ಎಲ್ಲವೂ ನಿಮ್ಮ ಪರವಾಗಿ ನಡೆಯುವುದು.
ಕಟಕ
ಹೆಚ್ಚು ಹೊಣೆಗಾರಿಕೆ. ಇತರರ ಕೆಲಸವನ್ನೂ ನೀವೇ ಮಾಡಬೇಕಾದ ಪ್ರಸಂಗ. ಆರ್ಥಿಕ ವ್ಯವಹಾರದಲ್ಲಿ ಲಾಭ. ಬಂಧುಗಳಿಂದ ಉತ್ತಮ ಸಹಕಾರ.
ಸಿಂಹ
ದಿನವಿಡೀ ಕಾರ್ಯದ ಒತ್ತಡ. ಹೆಚ್ಚಿನ ಹೊಣೆಗಾರಿಕೆ. ನಿಮ್ಮ ಯೋಜನೆ ಸಫಲತೆ ಕಾಣುವುದು. ಕುಟುಂಬದ ಜತೆ ಹೆಚ್ಚು ಕಾಲ ಕಳೆಯುವಿರಿ.
ಕನ್ಯಾ
ಅತೀ ಆಪ್ತರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ವೃತ್ತಿಯಲ್ಲಿ ಅನಿರೀಕ್ಷಿತ ಧನಲಾಭ.
ತುಲಾ
ಇಂದು ಮಹತ್ವದ ನಿರ್ಧಾರ ತಾಳಲು ಹೋಗದಿರಿ. ಅದು ನಿರೀಕ್ಷಿತ ಫಲ ನೀಡದು. ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡುವುದು.
ವೃಶ್ಚಿಕ
ಚಿಂತೆಗೆ ಕಾರಣವಾಗುವ ಪ್ರಸಂಗ ಉಂಟಾದೀತು. ಅದನ್ನು ಸಹನೆಯಿಂದ ನಿಭಾಯಿಸಿ. ಸಮಸ್ಯೆಗೆ ಪರಿಹಾರ ಕಷ್ಟವಲ್ಲ ಎಂಬ ಅರಿವು ನಿಮಗೆ ಆಗಲಿದೆ. ಖರ್ಚು ಅಧಿಕ.
ಧನು
ಪ್ರೀತಿಪಾತ್ರರ ಜತೆ ವಾಗ್ವಾದ ನಡೆದೀತು. ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಲು ಕಲಿತರೆ ಇಂತಹ ಸಂಘರ್ಷ ನಿವಾರಿಸಬಹುದು.
ಮಕರ
ಪ್ರೀತಿಯ ವಿಷಯದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಬೆಳವಣಿಗೆ ನಡೆದೀತು. ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸಿ. ಆವೇಶ ಪಡದಿರಿ.
ಕುಂಭ
ಖರೀದಿಯ ಹುಮ್ಮಸ್ಸಿನಿಂದ ಜೇಬಿಗೆ ಕತ್ತರಿ ಬೀಳಬಹುದು. ಉಳಿತಾಯಕ್ಕೂ ಗಮನ ಕೊಡಿ. ಕುಟುಂಬ ಸಮಸ್ಯರ ಜತೆ ಶಾಂತ ಮನಸ್ಸಿನಿಂದ ವರ್ತಿಸಿರಿ.
ಮೀನ
ಇಂದು ಅದೃಷ್ಟ ನಿಮ್ಮ ಜತೆಗಿದೆ. ಹಾಗಾಗಿ ಎಲ್ಲ ಕಾರ್ಯಗಳು ಸಫಲ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ವೃತ್ತಿಯಲ್ಲಿ ಹೊಸ ಚಿಂತನೆ ಅಳವಡಿಸಲು ಸಕಾಲ.