ಮೇಷ
ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕು ವುದು. ವೃತ್ತಿಯಲ್ಲಿ ಯಶಸ್ಸು. ವೈಯಕ್ತಿಕ ಬದುಕಿನಲ್ಲಿ ಸಂತೋಷ. ಕೌಟುಂಬಿಕ ನೆಮ್ಮದಿ ಮರಳುವುದು.
ವೃಷಭ
ನಿಮ್ಮ ಮಾತು, ವರ್ತನೆ ತಿದ್ದಿಕೊಳ್ಳದಿದ್ದರೆ ಕೆಲವು ಸ್ನೇಹಿತರನ್ನು ಕಳಕೊಳ್ಳುವಿರಿ. ದುಡುಕು, ರೋಷ ಬಿಡಿ. ಸಮಾಧಾನದ ನಡೆ ಒಳ್ಳೆಯದು.
ಮಿಥುನ
ವೃತ್ತಿಗಿಂತ ವೈಯಕ್ತಿಕ ವಿಷಯಗಳೇ ಇಂದು ನಿಮಗೆ ಪ್ರಾಮುಖ್ಯತೆ ಪಡೆಯುತ್ತವೆ. ಆಪ್ತರ ವರ್ತನೆ ನಿಮ್ಮ ಭಾವನೆಯ ಏರುಪೇರಿಗೆ ಕಾರಣ.
ಕಟಕ
ಬಿಡುವಿಲ್ಲದ ಕೆಲಸ. ಅದರ ಜತೆಗೇ ಕೌಟುಂಬಿಕ ಒತ್ತಡ. ಮನಸ್ಸು ಮತ್ತು ಹೃದಯ ಎರಡೂ ಭಾರವಾದೀತು. ಸಹನೆಯಿರಲಿ.
ಸಿಂಹ
ಆರ್ಥಿಕ ವಿಷಯ ಆದ್ಯತೆ ಪಡೆಯುತ್ತದೆ.ಅಗತ್ಯ ಕಾರ್ಯಕ್ಕೆ ಹಣದ ಹೊಂದಾಣಿಕೆ
ಯಲ್ಲಿ ತೊಡಗುವಿರಿ. ಆದರೆ ಅಡ್ಡಿಗಳು ಎದುರಾಗುತ್ತವೆ.
ಕನ್ಯಾ
ನೀವು ಕೈಗೊಂಡ ಕಾರ್ಯದಲ್ಲಿ ನಿಮಗೆ ಯಶಸ್ಸು ದೊರಕಲಿದೆ. ಆರ್ಥಿಕವಾಗಿಯೂ ಸುಗಮ ದಿನ. ದೊಡ್ಡ ಖರ್ಚು ಬಾಧಿಸದು. ಧನ ಲಾಭ.
ತುಲಾ
ಅಧಿಕ ಕೆಲಸದ ಒತ್ತಡ. ಅಧಿಕ ಖರ್ಚು. ವಿರಾಮವಿಲ್ಲದ ದಿನ. ಇದು ನಿಮ್ಮ ಇಂದಿನ ದಿನಚರಿ. ಕೌಟುಂಬಿಕ ಸದಸ್ಯರು ನಿಮಗೆ ಸಾಂತ್ವನ ನೀಡುವರು.
ವೃಶ್ಚಿಕ
ಕಷ್ಟದ ದಿನ. ಇತರರಿಂದ ಅಸಹಕಾರ. ಇಚ್ಛಿಸಿದ ಕಾರ್ಯ ಪೂರ್ಣ ಗೊಳಿಸಲು ಕಷ್ಟ. ವೈಯಕ್ತಿಕವಾಗಿಯೂ ನಿರಾಶೆಯ ದಿನ. ಖರ್ಚು ಹೆಚ್ಚಳ.
ಧನು
ನಿಮ್ಮ ಕಾರ್ಯಕ್ಷಮತೆ ಎಲ್ಲರ ಗಮನ ಸೆಳೆಯುವುದು. ಇತರರು ನಿಮ್ಮ ಮಾರ್ಗದರ್ಶನ ಪಡೆಯುತ್ತಾರೆ. ಕೌಟುಂಬಿಕ ಶಾಂತಿ.
ಮಕರ
ಕಾರ್ಯವೊಂದು ಸುಲಲಿತವಾಗಿ ನಡೆದು ನಿಮಗೆ ನಿರಾಳತೆ ತರುವುದು. ಬಂಧುಗಳ ಜತೆಗಿನ ವಿರಸ ನಿವಾರಣೆ. ಕೌಟುಂಬಿಕ ಸಮಾಧಾನ.
ಕುಂಭ
ಯಾವುದೋ ಸಮಸ್ಯೆಯು ಹೆಚ್ಚು ಚಿಂತೆಗೆ ಕಾರಣವಾಗುತ್ತದೆ. ಇತರರ ಸಲಹೆ ಪಡೆದು ಅದಕ್ಕೆ ಪರಿಹಾರ ಕಂಡುಕೊಳ್ಳಿ.
ಮೀನ
ಆತ್ಮೀಯರ ಒಡನಾಟದಲ್ಲಿ ಕಾಲ ಕಳೆಯುವಿರಿ. ಅವರೊಂದಿಗೆ ಸಣ್ಣ ವಿಷಯಗಳಿಗೆ ಜಗಳವಾಗಬಹುದು. ಆದರೆ ಬೇಗ ರಾಜಿ.