ದಿನಭವಿಷ್ಯ: ಇಂದು ಈ ರಾಶಿಯವರಿಗೆ ಅದೃಷ್ಟ ತರಲಿದ್ದಾನೆ ಶನಿ

ಮೇಷ
ಇತರರಿಂದ ಸಾಧ್ಯವಾಗದ ಕಾರ್ಯ ನೀವು ಮಾಡುವಿರಿ. ನಿಮ್ಮ ಸಾಧನೆ ಇತರರ ಗಮನ ಸೆಳೆಯಲಿದೆ. ನಿಮ್ಮ ಮುಖ್ಯ ಉದ್ದೇಶ ಇಂದು ಈಡೇರುವುದು.

ವೃಷಭ
ವೃತ್ತಿಯಲ್ಲಿ ನಿಮ್ಮ ಸಾಮರ್ಥ್ಯ ಗುರುತಿಸಲ್ಪಡುವುದು. ಇದೇವೇಳೆ ನಿಮ್ಮ ಹೊಣೆಯೂ ಹೆಚ್ಚುವುದು. ಕೆಲವರ ಅಸಹಕಾರ.

ಮಿಥುನ
ಕೆಲವು ಸಮಸ್ಯೆ ನಿಮ್ಮ ಅಸಹನೆ ಹೆಚ್ಚಿಸುವುದು. ಅನವಶ್ಯ ವಿಚಾರ ತಲೆಯಲ್ಲಿ ತುಂಬಿಕೊಳ್ಳುವುದು. ಕರ್ತವ್ಯಕ್ಕೆ ಅಡ್ಡಿ ಉಂಟಾಗದಿರಲಿ.

ಕಟಕ
ವ್ಯವಹಾರದಲ್ಲಿ ಯಶಸ್ಸು. ಅಡ್ಡಿಗಳ ನಿವಾರಣೆ. ಹೊಸ ವ್ಯವಹಾರಕ್ಕೆ ಯೋಚಿಸದೆ ಕೈ ಹಾಕಬೇಡಿ. ಕೌಟುಂಬಿಕ ಅಸಹಕಾರ.

ಸಿಂಹ
ಬೆಳಗಿನ ಹೊತ್ತು ಅಸ್ಥಿರತೆ, ಆತಂಕ ಕಾಡುವುದು. ಬಳಿಕ ಇದರಿಂದ ನಿರಾಳತೆ ಪಡೆಯುವಿರಿ. ಕುಟುಂಬಸ್ಥರ ಜತೆ ಸಮಯ ಕಳೆಯಿರಿ.

ಕನ್ಯಾ
ಹಣದ ವ್ಯಹಾರದಲ್ಲಿ ಯಶ ಸಿಗುವುದು. ತೃಪ್ತಿಕರ ಬೆಳವಣಿಗೆ. ಕುಟುಂಬಸ್ಥರ ಜತೆ ಹೆಚ್ಚು ಕಾಲ ಕಳೆಯಲು ಗಮನ ಕೊಡಿ. ಅವರ ಆವಶ್ಯಕತೆ ಪೂರೈಸಿರಿ.

ತುಲಾ
ನಿಮ್ಮ ಕಾರ್ಯದ ಕುರಿತಂತೆ ಇಂದು ಉದಾಸ ಭಾವ ಕಾಡಲಿದೆ. ಇತರ ಕೆಲ ವಿಷಯ ನಿಮ್ಮ ಗಮನ ಬೇರೆಡೆ ಸೆಳೆಯುವುದು. ಕೌಟುಂಬಿಕ ಉದ್ವಿಗ್ನತೆ.

ವೃಶ್ಚಿಕ
ನಿಮ್ಮ ಕೆಲಸ ಇಂದೇ ಪೂರೈಸಲು ಗಮನ ಕೊಡಿ. ಬಾಕಿ ಉಳಿಸಿದರೆ ನಿಮಗೇ ಹಾನಿ. ವ್ಯವಹಾರದಲ್ಲಿ ಆರ್ಥಿಕ ಲಾಭ. ಖರೀದಿ ಉತ್ಸಾಹ, ಖರ್ಚು ಹೆಚ್ಚಳ.

ಧನು
ಕೌಟುಂಬಿಕ ಸಮಸ್ಯೆ ಪರಿಹರಿಸಲು ಶಕ್ತರಾಗುವಿರಿ. ಆತ್ಮವಿಶ್ವಾಸ ಹೆಚ್ಚುವುದು. ಬಂಧುಗಳಿಂದ ನಿಮಗೆ ಸಹಕಾರ ಲಭ್ಯ.

ಮಕರ
ನಿಮ್ಮ ಗುರಿ ಸಾಧಿಸುವ ಕಾರ್ಯಕ್ಕೆ ಕೆಲವರು ಅಡ್ಡಿ ಬರುತ್ತಾರೆ. ಅವರಿಂದ ದೂರವಿರಿ. ಅನವಶ್ಯ ಖರ್ಚು ನಿಯಂತ್ರಿಸಿ. ಆಪ್ತರ ಸಹಕಾರ ಲಭ್ಯ.

ಕುಂಭ
ಕೆಲವರ ಕಾರಣದಿಂದಾಗಿ ನಿಮ್ಮ ಮನಸ್ಸು ಇಂದು ನೆಗೆಟಿವ್ ಚಿಂತನೆಯಿಂದ ತುಂಬುವುದು. ಇತರರಿಗೆ ನೆರವು ನೀಡಲು ಮುಂದಾಗಿ.

ಮೀನ
ಬಯಸಿದ ಉದ್ದೇಶವೊಂದು ಇಂದು ಈಡೇರುವುದು. ಆತ್ಮೀಯರ ಜತೆ ಸಂತೋಷದ ಕಾಲಕ್ಷೇಪ. ವಿವಾಹಾಕಾಂಕ್ಷಿಗಳಿಗೆ ಶುಭ ಸುದ್ದಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!