ದಿನಭವಿಷ್ಯ: ಎಚ್ಚರಿಕೆಯಿಂದ ಮಾತನಾಡಿ, ನಿಮ್ಮ ಮಾತು ಇನ್ನೊಬ್ಬರಿಗೆ ತೊಂದರೆಯಾದೀತು

ಮೇಷ
ನೀವು ಇಂದು ಅಸಹಜವಾಗಿ ವರ್ತಿಸುವ ಮೂಲಕ ಕೆಲವರಿಗೆ ಅಚ್ಚರಿ ಸೃಷ್ಟಿಸುವಿರಿ.ಯಾವುದೇ ವಿಚಾರದಲ್ಲಿ  ಆತುರದ ತೀರ್ಮಾನ ಸಲ್ಲದು.

ವೃಷಭ
ಅಸಹನೆ ಹೆಚ್ಚು. ಯಾವುದೇ ವಿಷಯದಲ್ಲಿ ಶಾಂತವಾಗಿ ಕಾಯುವ ತಾಳ್ಮೆ ನಿಮಗಿಲ್ಲ. ಮನೆಯಲ್ಲಿ ಮತ್ತು ವೃತ್ತಿಯಲ್ಲಿ ಕೆಲವು ಸಮಸ್ಯೆಗಳು ಕಾಡುತ್ತವೆ.

ಮಿಥುನ
ನಿಮ್ಮ ಪ್ರೀತಿಪಾತ್ರರ ಹಿತಾಸಕ್ತಿಗೆ ಗಮನ ಹರಿಸಿ. ಅವರ ಕಾಳಜಿ ಕಡೆಗಣಿಸಬೇಡಿ. ಉದ್ದೇಶ ಸಾಧಿಸಲಾಗದೆ ಅಸಹನೆ ಹೆಚ್ಚುವುದು. ಸಂಯಮ ಅಗತ್ಯ.

ಕಟಕ
ಸವಾಲು ಕಾಡುವುದು. ಅದನ್ನು ಎದುರಿಸುವ ಛಲವೂ ಹೆಚ್ಚುವುದು. ಅದು ನಿಮ್ಮ ಸಹಜ ಗುಣ. ಸಮಸ್ಯೆಗೆ ಅಂಜಿ ಹೆದರಿ ಓಡದಿರಿ. ದಿಟ್ಟವಾಗಿ ಎದುರಿಸಿ.

ಸಿಂಹ
ಆತುರದ ನಿರ್ಧಾರ ಪ್ರತಿಕೂಲ ಪರಿಣಾಮ ಬೀರಬಹುದು. ಹಾಗಾಗಿ ಜಾಗೃತರಾಗಿ ಕೆಲಸ ನಿರ್ವಹಿಸಿ. ವಿರೋಧಿಗಳನ್ನು ಜಾಣ್ಮೆಯಿಂದ ನಿಭಾಯಿಸಿ.

ಕನ್ಯಾ
ನಿಮ್ಮ ಸುತ್ತಲಿನ ವ್ಯಕ್ತಿಗಳ ಜತೆ ಸಂಬಂಧ ಸುಧಾರಣೆ ನಿಮ್ಮ ಗುರಿ. ಆದರೆ ಅವರಿಂದ ಪೂರಕ ಸ್ಪಂದನೆ ಕಾಣದು. ಕೆಲವು ಸತ್ಯಗಳು ನಿಮಗೆ ಕಹಿಯೆನ್ನಿಸಬಹುದು.

ತುಲಾ
ನೆಗೆಟಿವ್ ಚಿಂತನೆ ಮಾಯವಾಗಿ ಮನಸ್ಸು ನಿರಾಳವಾಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆ. ನಿಮ್ಮ ಸುತ್ತ ನೀವು ಬಯಸಿದ ಬದಲಾವಣೆ ಸಂಭವಿಸುವುದು.

ವೃಶ್ಚಿಕ
ಇತರರು ಹರಡುವ ವದಂತಿಗಳಿಗೆ ಕಿವಿಗೊಡದಿರಿ. ನಿಮ್ಮ ಉತ್ಸಾಹವನ್ನು  ಮರಳಿ ತುಂಬಿಕೊಳ್ಳಿ. ಇತರರು ಸೃಷ್ಟಿಸಿದ ಸಮಸ್ಯೆ ನೀವು ಪರಿಹರಿಸಬೇಕಾದೀತು.

ಧನು
ಯಾವುದೇ ವಿಚಾರದಲ್ಲಿ ಗೊಂದಲದ ಮನಸ್ಥಿತಿ ಬಿಟ್ಟುಬಿಡಿ. ದೃಢ ನಿಲುವು ತಾಳಬೇಕಾದ ಸಮಯವಿದು. ಅಧಿಕ ಕೆಲಸವಿದ್ದರೂ ದಿನದಂತ್ಯಕ್ಕೆ ತೃಪ್ತಿ.

ಮಕರ
ಹಣ ನೀರಿನಂತೆ ಖರ್ಚಾದೀತು. ಆದರೆ ನಿಮಗೆ ಖೇದವಿಲ್ಲ. ಒಳಿತಿಗೇ ಆಗಲಿದೆ ಎಂಬ ಭಾವನೆ. ಸಾಮಾಜಿಕವಾಗಿ ನಿಮಗೆ ಪೂರಕ ವಾತಾವರಣ.

ಕುಂಭ
ಸಣ್ಣ ವಿಷಯಗಳಿಗೆ ಅತಿಯಾಗಿ ಚಿಂತಿಸುತ್ತಾ ಮಹತ್ವದ ವಿಷಯ ಕಡೆಗಣಿಸಿದ್ದೀರಿ. ಇನ್ನಾದರೂ ಅದರತ್ತ ಗಮನ ಹರಿಸಿ. ಚಿಂತೆ ಬಿಟ್ಟುಬಿಡಿ.

ಮೀನ
ಸಣ್ಣ ಪ್ರತಿಕೂಲ ಪರಿಸ್ಥಿತಿ ಬಂದಾಕ್ಷಣ ಅಧೀರರಾಗದಿರಿ. ಅದನ್ನು ಎದುರಿಸಿ. ಕೊನೆಯ ಗೆಲುವು ನಿಮ್ಮದೆ. ಆರ್ಥಿಕ ಉನ್ನತಿ ಸಾಧಿಸುವಿರಿ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!