ದಿನಭವಿಷ್ಯ: ಇಂದು ಈ ರಾಶಿಗೆ ವಿಶೇಷ ಯೋಗಗಳ ಸಂಯೋಗ

ಮೇಷ: ವಿಶೇಷ ಘಟಿಸದ ಸಾಧಾರಣ ದಿನ. ಖಾಸಗಿ ಬದುಕಿನಲ್ಲಿ ಕೆಲವು ಬದ್ಧತೆ ಪೂರೈಸಬೇಕಾದ ಒತ್ತಡ. ಬಂಧುಗಳಿಂದ ಶುಭ ಸುದ್ದಿ ಕೇಳುವ ಸಾಧ್ಯತೆ

ವೃಷಭ: ಖಾಸಗಿಯಾಗಿ ಮತ್ತು ವೃತ್ತಿಪರವಾಗಿ ಮಹತ್ವದ ದಿನ. ಕೋಪ, ಅಸಹನೆ ಬಿಟ್ಟು ಆತ್ಮೀಯವಾಗಿ ವರ್ತಿಸಬೇಕು. ಇಲ್ಲವಾದರೆ ನಿಷ್ಟುರ ಕಟ್ಟಿಕೊಳ್ಳುವಿರಿ.

ಮಿಥುನ:ಎಲ್ಲರನ್ನೂ ಮೆಚ್ಚಿಸಲು ಹೋಗಬೇಡಿ. ನೀವು ಏನು ಮಾಡಿದರೂ ಅವರು ನಿಮ್ಮನ್ನು ಹೊಗಳಲಾರರು. ನಿಮ್ಮ ಕಾರ್ಯಕ್ಕಷ್ಟೇ ನೀವು ಗಮನ ಕೊಡಿರಿ.

ಕಟಕ:ಕುಟುಂಬದ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ.  ಕಾಡುವ ಸಮಸ್ಯೆಯನ್ನು  ಕೌಶಲದಿಂದ  ಪರಿಹರಿಸಲು ಶಕ್ತರಾಗುವಿರಿ.

ಸಿಂಹ: ಬಾಕಿ ಉಳಿದಿರುವ ಕಾರ್ಯ ಪೂರೈಸಲು ಹೆಚ್ಚು ಗಮನ ಕೊಡಿ. ಅಗತ್ಯವಿರುವ ವಸ್ತು ಖರೀದಿಯನ್ನು ಇನ್ನಷ್ಟು ಮುಂದೆ ಹಾಕದಿರಿ. ವಿದ್ಯಾರ್ಥಿಗಳಿಗೆ ಯಶ.

ಕನ್ಯಾ:ನೀವು ಕೈಗೊಂಡ ನಿರ್ಧಾರ ಅನುಷ್ಠಾನ ಮಾಡಿ.ಹಾಗೆ ಮಾಡಿದರಷ್ಟೇ ಫಲ ಸಿಗುವುದು. ಆಪ್ತರ ಮುನಿಸು ಎದುರಿಸುವಿರಿ.

ತುಲಾ:   ನಿಮ್ಮ ಖಾಸಗಿ ಜೀವನಕ್ಕೆ ಸಂಬಂಧಿಸಿ ಬಹುಮುಖ್ಯ ನಿರ್ಧಾರ ತಾಳಬೇಕಾದ ಅನಿವಾರ್ಯತೆ ಬರುವುದು. ಆಪ್ತರ ಸಹಕಾರ ನಿಮಗಿದೆ.

ವೃಶ್ಚಿಕ: ಸಮಸ್ಯೆಯೊಂದು ಪರಿಹಾರ ಕಂಡ ಸಮಾಧಾನ. ನಿರಾಳ ದಿನ. ಆತ್ಮೀಯರ ಜತೆ ಕಾಲಕ್ಷೇಪ. ಹಣದ ವಿಚಾರದಲ್ಲಿ ಒತ್ತಡ ನಿವಾರಣೆ.

ಧನು:ನಿಮ್ಮ ಆಕಾಂಕ್ಷೆ, ಗುರಿ ಈಡೇರಿಸಲು ಯಾವ ಪ್ರಯತ್ನಕ್ಕೂ ಮುಂದಾಗುವಿರಿ. ಆದರೆ ಅತಿಯಾದ ರಿಸ್ಕ್ ತೆಗೆದುಕೊಳ್ಳದಿರಿ. ಅದರಿಂದ ಹಾನಿ.

ಮಕರ:ಮಾನಸಿಕ ಒತ್ತಡ. ಅಭದ್ರತೆಯ ಭಾವನೆ.  ಕೆಲ ವಿಷಯಗಳನ್ನು ಅಗತ್ಯಕ್ಕಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಲು ಹೋಗದಿರಿ.

ಕುಂಭ: ಪ್ರೀತಿಪಾತ್ರರ ಜತೆ ಭಾವನೆ ಹಂಚಿಕೊಳ್ಳಲು ಹಿಂಜರಿಕೆ ಬೇಡ. ನಿಮಗೆ ಸೂಕ್ತ ಸ್ಪಂದನೆ ದೊರಕುವುದು. ಆಹಾರ ಸೇವನೆ ನಿಗದಿತ ಸಮಯದಲ್ಲಿ ಮಾಡಿ.

ಮೀನ:  ಕೆಲವು ಚಿಂತೆಗಳು ಕಾಡುವವು. ಅವು ಕಳೆದುಹೋದ ದಿನಗಳಿಗೆ ಸಂಬಂಧಿಸಿದ್ದು. ವರ್ತಮಾನ, ಭವಿಷ್ಯದತ್ತ ಹೆಚ್ಚು ಗಮನ ಹರಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!