ದಿನಭವಿಷ್ಯ : ಇಂದು ಈ ರಾಶಿಯವರಿಗೆ ಸುವರ್ಣ ದಿನ

ಮೇಷ
ಹೊಸ ವ್ಯಕ್ತಿಯೊಬ್ಬರು ನಿಮ್ಮ ಜೀವನ ಪ್ರವೇಶಿಸಬಹುದು. ವೃತ್ತಿ ಕ್ಷೇತ್ರದಲ್ಲಿ ಬದಲಾವಣೆ. ಸಂಜೆ ವೇಳೆಗೆ ದೇಹಾಲಸ್ಯ ಕಾಡಲಿದೆ.
ವೃಷಭ
ತಪ್ಪಿಸಲಾಗದ ಸಮಸ್ಯೆ ಎದುರಿಸುವಿರಿ. ಅದರಿಂದ ಪಲಾಯನ ಮಾಡುವ ಬದಲಿಗೆ ಅದನ್ನು ಪರಿಹರಿಸಲು ಹೆಚ್ಚು ಗಮನ ಕೊಡಿರಿ.
ಮಿಥುನ
ಬದುಕಿನಲ್ಲಿ ಬದಲಾವಣೆಗೆ ಹಾತೊರೆಯುವಿರಿ. ಆರ್ಥಿಕ ಸಮಸ್ಯೆ ಕಾಡಲಿದೆ. ಖರ್ಚು ನಿಯಂತ್ರಣ ಮುಖ್ಯ.
ಕಟಕ
ಬದುಕಿಗೆ ಸಂಬಂಧಿಸಿ ಕವಲುದಾರಿಯಲ್ಲಿದ್ದೀರಿ. ನಿಮ್ಮ ನಿರ್ಧಾರ ಮುಂದಿನ ಪಥ ನಿರ್ಧರಿಸಲಿದೆ. ಯೋಚಿಸಿ, ವಿವೇಕಯುತ ನಿರ್ಧಾರ ತಾಳಿ.
ಸಿಂಹ
ಗುಣಾತ್ಮಕ ಚಿಂತನೆ ನಿಮ್ಮ ಉತ್ತಮ ಸ್ವಭಾವ. ಅದರಿಂದ ಸಮಸ್ಯೆ ಪರಿಹರಿಸಿಕೊಳ್ಳುವಿರಿ. ಸವಾಲನ್ನು ದಿಟ್ಟವಾಗಿ ಎದುರಿಸುವಿರಿ.
ಕನ್ಯಾ
ನೀವು ಮಾಡಿದ ತಪ್ಪನ್ನು ಸರಿಪಡಿಸುವ ವಿವೇಕ ತೋರಿ. ತಪ್ಪನ್ನೇ ಸಮರ್ಥಿಸುವುದು ಸಲ್ಲದು. ಸಾಂಸಾರಿಕ ಸಂಘರ್ಷ ತಪ್ಪಿಸಿರಿ.
ತುಲಾ
ಇತರರ ಮುಂದೆ ಕೀಳರಿಮೆ, ಹಿಂಜರಿಕೆ ಪ್ರದರ್ಶಿಸಬೇಡಿ. ನೀವು ಅವರ ಸಮಾನರು ಎಂಬಂತೆ ವರ್ತಿಸಿ. ಕೌಟುಂಬಿಕ ಸಹಕಾರ.
ವೃಶ್ಚಿಕ
ಸಾಮಾಜಿಕ ಪರಿಸರದಲ್ಲಿ ಮುಜುಗರ ಎದುರಿಸುವಿರಿ. ನಿಮಗೆ ಇಷ್ಟವಿಲ್ಲದ ವಿಷಯದಲ್ಲಿ ತೊಡಗಬೇಡಿ. ಆತ್ಮವಿಶ್ವಾಸ ಅತಿ ಮುಖ್ಯ.
ಧನು
ವೃತ್ತಿಯಲ್ಲಿ ಒತ್ತಡ ಕಡಿಮೆ. ದೊಡ್ಡ ಖರ್ಚಿನ ಕಾರ್ಯವೊಂದಕ್ಕೆ ಯೋಜನೆ ಹಾಕುವಿರಿ. ಶೀತ, ಜ್ವರ ಕಾಡಬಹುದು, ಮುನ್ನೆಚ್ಚರಿಕೆ ವಹಿಸಿ.
ಮಕರ
ಕೆಲವರು ಇಂದು ನಿಮಗೆ ಕಿರಿಕಿರಿ ನೀಡಬಹುದು. ಅವರನ್ನು ತಪ್ಪಿಸಿಕೊಳ್ಳುವುದೇ ನಿಮ್ಮ ಕೆಲಸವಾಗುವುದು.  ದೇಹಾರೋಗ್ಯ ಕಾಪಾಡಿ.
ಕುಂಭ
ಸರಿಯಾದ ಆರ್ಥಿಕ ಯೋಜನೆ ಹಾಕಿಕೊಳ್ಳಿ. ಅನವಶ್ಯ ವೆಚ್ಚ ತಪ್ಪಿಸಿರಿ. ಶುಭಸುದ್ದಿಯೊಂದು ನಿಮಗೆ ತಲುಪಲಿದೆ. ಕೌಟುಂಬಿಕ ಸಾಮರಸ್ಯ.
ಮೀನ
ಯಾವುದೇ ವಿಷಯದ ಬಗ್ಗೆ ಅತಿಯಾಗಿ ಚಿಂತಿಸಿ ಕೊರಗುವಿರಿ. ಸಮಚಿತ್ತ ಬೆಳೆಸಿಕೊಳ್ಳಿ. ಮಾನಸಿಕ ನೋವು ಉಣ್ಣದಿರಿ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!