ದಿನಭವಿಷ್ಯ: ಇಂದು ಈ ರಾಶಿಗೆ ತುಂಬಾ ಒಳ್ಳೆಯ ದಿನ!

ಮೇಷ
ಉದ್ಯೋಗ ಬದಲಾವಣೆ, ಮನೆ ಬದಲಾವಣೆಗೆ ಯೋಚಿಸಿದ್ದರೆ ಅದು ಸಾಧ್ಯವಾಗಲಿದೆ. ಕೌಟುಂಬಿಕ ಭಿನ್ನಮತ ಪರಿಹಾರ.

ವೃಷಭ
ಉದ್ಯೋಗಕ್ಕೆ ಆದ್ಯತೆ ನೀಡಿ ನಿಮ್ಮ ಪ್ರೀತಿಯ ಬದುಕನ್ನು ನಿರ್ಲಕ್ಷಿಸಬೇಡಿ. ಆ ಕುರಿತೂ ಗಮನ ಹರಿಸಿ. ಪ್ರೀತಿಪಾತ್ರರಿಗೆ ನೋವು ನೀಡದಿರಿ.

ಮಿಥುನ
ಇತರರ ಜತೆ ವ್ಯವಹರಿಸುವಾಗ ನಡೆ-ನುಡಿಯಲ್ಲಿ ವಿನಯವಿರಲಿ. ಉದ್ಧಟ ವರ್ತನೆ ಫಲ ನೀಡದು. ಟೀಕೆ ಎದುರಿಸಬೇಕಾದೀತು.

ಕಟಕ
ನಿಮ್ಮ ವರ್ತನೆಯಲ್ಲಿ ಬದಲಾವಣೆ ತರುವ ಪ್ರಸಂಗ ಉಂಟಾದೀತು. ರೋಷಾವೇಷ ನಿಯಂತ್ರಿಸಿ ಸಮಾಧಾನ ರೂಢಿಸಿಕೊಳ್ಳಿ. ಆರ್ಥಿಕ ಒತ್ತಡ ಹೆಚ್ಚು.

ಸಿಂಹ
ದೈನಂದಿನ ವ್ಯವಹಾರ ದಲ್ಲಿ ಅನವಶ್ಯ ಒತ್ತಡ ಸೃಷ್ಟಿಸಿಕೊಳ್ಳದಿರಿ. ಎಲ್ಲವನ್ನು ಸಮಾಧಾನ ದಿಂದ ನೆರವೇರಿಸಿ. ಅಗತ್ಯವಿರುವ ಸಹಕಾರ ದೊರಕುವುದು.

ಕನ್ಯಾ
ಕಷ್ಟವೆಂದು ಭಾವಿಸಿದ ಕಾರ್ಯ ಸುಲಭದಲ್ಲಿ ಮುಗಿಯುವುದು. ಅನಿರೀಕ್ಷಿತ ನೆರವು ಒದಗುವುದು. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು.

ತುಲಾ
ಕೆಲಸದಿಂದ ವಿರಾಮ. ಹಾಗಾಗಿ ಮನೆಯವರ ಜತೆ ಕಳೆಯುವ ಅವಕಾಶ. ಆಹಾರ ಸೇವನೆಯಲ್ಲಿ ಹಿತಮಿತ ಸಾಧಿಸಿ. ಇಲ್ಲವಾದರೆ ಹೊಟ್ಟೆ ಕೆಡಬಹುದು.

ವೃಶ್ಚಿಕ
ಬಾಕಿ ಉಳಿದಿರುವ ಕಾರ್ಯಗಳನ್ನು ಪೂರೈಸಲು ಆದ್ಯತೆ ಕೊಡಿ. ಆರೋಗ್ಯ ಸಮಸ್ಯೆಯೊಂದು ಚಿಂತೆಗೆ ಕಾರಣವಾದೀತು. ಆರ್ಥಿಕ ಒತ್ತಡ.

ಧನು
ಒಂದು ಬಗೆಯ ಉದಾಸೀನತೆ, ಜಡತ್ವ ಕಾಡಬಹುದು. ಹುರುಪು ತುಂಬಿಕೊಳ್ಳಿ. ವಿವಾಹಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ. ಕೌಟುಂಬಿಕ ನೆಮ್ಮದಿ.

ಮಕರ
ವೃತ್ತಿಗೆ ಸಂಬಂಧಿಸಿ ಉತ್ತಮ ಬೆಳವಣಿಗೆ. ಆಪ್ತ ಬಂಧುಗಳಿಂದ ಉತ್ತಮ ಸಹಕಾರ. ಮನೆಯಲ್ಲಿನ ಸಂಬಂಧ ಹಾಳಾಗದಂತೆ ಎಚ್ಚರ ವಹಿಸಿರಿ.

ಕುಂಭ
ಆಧ್ಯಾತ್ಮಿಕ, ಪಾರಮಾರ್ಥಿಕ ವಿಷಯಗಳು ಆಸಕ್ತಿ ಹುಟ್ಟಿಸಬಹುದು. ನಿಮ್ಮ ಕಷ್ಟ ಮರೆಯಲು ಅದರಿಂದ ಸಹಕಾರಿ. ಹಣಕಾಸು ಸಮಸ್ಯೆ.

ಮೀನ
ನಿಷ್ಪಲವಾಯಿತೆಂದು ಭಾವಿಸಿದ ಕೆಲಸ ವೊಂದು ವಿಳಂಬವಾಗಿ ಫಲ ನೀಡಲಿದೆ. ಅದರಿಂದ ನಿರಾಳತೆ, ನೆಮ್ಮದಿ. ಕೌಟುಂಬಿಕ ಸಮಾಗಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!