ಮೇಷ
ಅವಿರತ ಕೆಲಸ. ವಿರಾಮಕ್ಕೆ ಅವಕಾಶ ಸಿಗದು. ಮಾನಸಿಕ ಮತ್ತು ದೈಹಿಕ ಸುಸ್ತು. ಜತೆಗೇ ನಿಮ್ಮ ಕಾರ್ಯ ವೈಖರಿ ಬಗ್ಗೆ ನಿಮಗೇ ತೃಪ್ತಿ ಮೂಡುವುದಿಲ್ಲ.
ವೃಷಭ
ವ್ಯವಹಾರದಲ್ಲಿ ಯಶಸ್ಸು. ಅಡ್ಡಿ ನಿವಾರಣೆ. ನೀವು ಬಹುವಾಗಿ ಹಚ್ಚಿಕೊಂಡಿರುವ ವ್ಯಕ್ತಿ ಅನಾದರ ತೋರಬಹುದು.
ಮಿಥುನ
ಕೆಲಸದ ಒತ್ತಡ ಹೆಚ್ಚು. ಉದ್ವಿಗ್ನತೆ ಹೆಚ್ಚಿಸುವ ಬೆಳವಣಿಗೆ ಉಂಟಾದೀತು. ಪ್ರತಿಕೂಲ ವಾತಾವರಣ ಆರೋಗ್ಯ ಸಮಸ್ಯೆ ಉಂಟು ಮಾಡೀತು.
ಕಟಕ
ಶುಭದಿನ. ಅಧಿಕ ಆದಾಯ. ಬಂಧುಗಳ ಜತೆಗಿನ ಸಂಬಂಧ ಉತ್ತಮ. ಪ್ರಮುಖ ವಿಷಯದಲ್ಲಿ ಮೂಡಿದ್ದ ಗೊಂದಲ, ಶಂಕೆ ನಿವಾರಣೆ.
ಸಿಂಹ
ವೃತ್ತಿಯಲ್ಲಿ ತೊಡಕು ಉಂಟಾದೀತು. ನಿಮ್ಮ ನಿಲುವು ಸ್ಪಷ್ಟಪಡಿಸಲು ಮರೆಯದಿರಿ. ಖರ್ಚಿನ ಮೇಲೆ ನಿಯಂತ್ರಣ ಸಾಧಿಸಿ. ಬಂಧುಗಳ ಅಸಹಕಾರ.
ಕನ್ಯಾ
ಸಮಸ್ಯೆಗಳು ಮುಗಿಯುತ್ತಲೇ ಇಲ್ಲ ಎಂಬ ಚಿಂತೆ ಕಾಡುವುದು. ಆ ಬಗ್ಗೆಯೆ ಯೋಚಿಸುತ್ತ ಕೂರಬೇಡಿ. ಪಾಸಿಟಿವ್ ಚಿಂತನೆ ಬೆಳೆಸಿ.
ತುಲಾ
ಕೌಟುಂಬಿಕ ವಿಷಯ ಇಂದು ಆದ್ಯತೆ ಪಡೆಯುವುದು. ಸಹನೆಯಿಂದ ವರ್ತಿಸಿ. ಅನವಶ್ಯ ವಾಗ್ವಾದ ತಪ್ಪಿಸಿರಿ. ಆರೋಗ್ಯಕ್ಕೂ ಗಮನ ಕೊಡಿ.
ವೃಶ್ಚಿಕ
ಮನಸ್ಸು ವಿಚಲಿತ ಗೊಳಿಸುವ ಪ್ರಸಂಗ ನಡೆದೀತು. ದೃಢತೆಯನ್ನು ಪ್ರದರ್ಶಿಸಿ. ಹಿನ್ನಡೆಗೆ ಅಂಜದೆ ಧೈರ್ಯದಿಂದ ಮುಂದುವರಿಯಿರಿ. ಎಲ್ಲ ಸರಿಯಾಗುವುದು.
ಧನು
ಕುಟುಂಬದ ಕುರಿತು ಅತ್ಯಂತ ಕಾಳಜಿ ವಹಿಸುವಿರಿ. ಸಮಸ್ಯೆ ಸಣ್ಣದಾದರೂ ನಿಮಗೆ ಅದು ದೊಡ್ಡ ಚಿಂತೆಗೆ ಕಾರಣವಾಗುವುದು. ದೈಹಿಕ ಅಸ್ವಸ್ಥತೆ.
ಮಕರ
ನಿಮಗೆ ಗೊಂದಲ ಮೂಡಿಸುವ ವಿಚಾರದಿಂದ ದೂರ ಇರಿ. ವ್ಯವಹಾರದಲ್ಲಿ ಸ್ಪಷ್ಟತೆ ಇರಲಿ. ಕಾಡುತ್ತಿದ್ದ ಸಮಸ್ಯೆಯೊಂದು ಪರಿಹಾರ ಕಾಣಲಿದೆ.
ಕುಂಭ
ಆಸುಪಾಸಿನವರ ವ್ಯವಹಾರದಲ್ಲಿ ನೀವು ತಲೆ ಹಾಕಬೇಡಿ. ಅದರಿಂದ ನಿಮಗೇ ಪ್ರತಿಕೂಲ. ಆಪ್ತರ ಜತೆ ವಾಗ್ವಾದ, ಭಿನ್ನಮತ ಉಂಟಾದೀತು.
ಮೀನ
ಎಲ್ಲಾ ವಿಷಯದಲ್ಲೂ ನಿಮಗಿಂದು ಯಶ ಸಿಗಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಪ್ರೀತಿಯಲ್ಲಿ ಸಫಲತೆ ದೊರಕುವದು.