ಟ್ರಾವಿಸ್-ನಿತೀಶ್ ಹೋರಾಟ: ರಾಜಸ್ಥಾನ ಗೆಲುವಿಗೆ 202 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ಟ್ರಾವಿಸ್ ಹೆಡ್ ಹಾಗೂ ನಿತೀಶ್ ರೆಡ್ಡಿ ಹೋರಾಟ ನೆರವಿನಿಂದ ರಾಜಸ್ಥಾನ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 3 ವಿಕೆಟ್ ನಷ್ಟಕ್ಕ 201 ರನ್ ಸಿಡಿಸಿದೆ.

ಟಾಸ್ ಗದ್ದ ಎಸ್‌ಆರ್‌ಹೆಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬೃಹತ್ ಮೊತ್ತ ಸಿಡಿಸಿವು ಲೆಕ್ಕಾಚಾರದಲ್ಲಿತ್ತು. ಆದರೆ ರಾಜಸ್ಥಾನ ರಾಯಲ್ಸ್ ಬೌಲಿಂಗ್ ದಾಳಿಗೆ ಹೈದರಾಬಾದ್ ಕುಸಿತ ಕಂಡಿತು. ಒಂದೆಡೆ ಟ್ರಾವಿಸ್ ಹೆಡ್ ಹೋರಾಟ ನಡೆಸಿದರೆ, ಮತ್ತೊಂದೆಡೆ ವಿಕೆಟ್ ಪತನಗೊಂಡಿತು. ಅಭಿಷೇಕ್ ಶರ್ಮಾ 12 ರನ್ ಸಿಡಿಸಿ ಔಟಾದರೆ, ಅನ್ಮೋಲ್‌ಪ್ರೀತ್ ಸಿಂಗ್ 8 ರನ್ ಸಿಡಿಸಿ ನಿರ್ಗಮಿಸಿದರು.

ನಿತೀಶ್ ರೆಡ್ಡಿ ಹಾಗೂ ಟ್ರಾವಿಸ್ ಹೆಡ್ ಜೊತೆಯಾಟದಿಂದ ಹೈದರಾಬಾದ್ ಮತ್ತೆ ದಿಟ್ಟ ಹೋರಾಟ ನೀಡಿತು. ಟ್ರಾವಿಸ್ ಹೆಡ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಟ್ರಾವಿಸ್ ಹೆಡ್ 44 ಎಸೆತದಲ್ಲಿ 58 ರನ್ ಸಿಡಿಸಿದರು. ನಿತೀಶ್ ರೆಡ್ಡಿಗೆ ಹೆನ್ರಿಚ್ ಕ್ಲಾಸೆನ್ ಉತ್ತಮ ಸಾಥ್ ನೀಡಿದರು.

ನಿತೀಶ್ ರೆಡ್ಡಿ 42 ಎಸೆತದಲ್ಲಿ ಅಜೇಯ 76 ರನ್ ಸಿಡಿಸಿದರೆ, ಹೆನ್ರಿಚ್ ಕ್ಲಾಸೆನ್ ಅಜೇಯ 42 ರನ್ ಸಿಡಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ 3 ವಿಕೆಟ್ ನಷ್ಟಕ್ಕೆ 201 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!