ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ

ಮೇಷ
ಅನಿರೀಕ್ಷಿತ ಖರ್ಚು ಒದಗುವುದು. ಅನವಶ್ಯ ವಸ್ತು ಖರೀದಿಗೆ ಮುಂದಾಗದಿರಿ. ಬಂಧುಗಳಿಂದ ಶುಭ ಸುದ್ದಿ ಕೇಳುವುದು. ಆರೋಗ್ಯ ತೃಪ್ತಿಕರ.

ವೃಷಭ
ವೃತ್ತಿಯಲ್ಲಿ ಉತ್ತಮ ಸಾಧನೆ ತೋರುವಿರಿ. ತೃಪ್ತಿಕರ ಬೆಳವಣಿಗೆ. ಆದರೆ ಕೌಟುಂಬಿಕ ವಿಚಾರದಲ್ಲಿ ಮಾತ್ರ ಅತೃಪ್ತಿ ಕಾಡುವುದು. ವೈಮನಸ್ಯ ಉಂಟಾದೀತು.

ಮಿಥುನ
ಕುಟುಂಬ ಮತ್ತು ವೃತ್ತಿಯ ಮಧ್ಯೆ ಸಮತೋಲನ ಇರಲಿ. ಯಾವುದೇ ಒಂದನ್ನು ಕಡೆಗಣಿಸಬೇಡಿ. ವೃತ್ತಿ ಒತ್ತಡ ನಿವಾರಿಸಲು ಕುಟುಂಬ ಸಹಕಾರಿ.

ಕಟಕ
ಯಾವುದೇ ಪರಿಸ್ಥಿತಿಯ ಲಾಭ-ನಷ್ಟ ನೋಡಿಕೊಂಡೇ ಮುಂದಿನ ಹೆಜ್ಜೆಯಿಡಿ. ಇಲ್ಲದಿದ್ದರೆ ಹಾನಿ ತಟ್ಟಲಿದೆ. ಉದ್ಯಮದಲ್ಲಿ ರಿಸ್ಕ್ ಬೇಡ.

ಸಿಂಹ
ಸುತ್ತಲಿನ ವ್ಯಕ್ತಿಗಳು ನಿಮ್ಮ ಕುರಿತಂತೆ ಪ್ರೀತಿ ಹರಿಸುತ್ತಾರೆ. ಅವರ ಸಂಗದಲ್ಲಿ ಸಂತೋಷ. ಅದರ ಜತೆಗೇ ಸಂತೋಷ ಕೆಡಿಸುವ ವ್ಯಕ್ತಿಗಳೂ ಇರಬಹುದು, ಎಚ್ಚರ.

ಕನ್ಯಾ
ಅನಿರೀಕ್ಷಿತ ವಸ್ತುಲಾಭ. ಪ್ರೀತಿಪಾತ್ರರು ನಿಮ್ಮ ಸಂತೋಷದಲ್ಲಿ ಪಾಲುದಾರಿಗಳು. ಕೌಟುಂಬಿಕ ಉದ್ವಿಗ್ನತೆ ನಿವಾರಣೆ, ಉತ್ತಮ ಹೊಂದಾಣಿಕೆ.

ತುಲಾ
ನಿಮ್ಮ ಪರಿಶ್ರಮಕ್ಕೆ ಉತ್ತಮ ಫಲ ದೊರಕುವುದು. ಆರ್ಥಿಕ ಲಾಭ ಗಳಿಸುವಿರಿ. ಕುಟುಂಬಸ್ಥರಿಂದ ನಿಮ್ಮ ಪ್ರಯತ್ನಗಳಿಗೆ ಉತ್ತಮ ಬೆಂಬಲ ಲಭ್ಯ.

ವೃಶ್ಚಿಕ
ಬಂಧುಮಿತ್ರರನ್ನು ಕಾಣುವ ಅವಕಾಶ. ಹಳೆಯ ನೆನಪುಗಳು ಕೆದಕಬಹುದು. ಆರ್ಥಿಕ ಸಮಸ್ಯೆಗಳು ಪರಿಹಾರ ಕಾಣುತ್ತವೆ. ದೇವರ ಅನುಗ್ರಹವಿದೆ.

ಧನು
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ನಿಮ್ಮ ಕುರಿತಂತೆ ಅತೀವ ನಿರೀಕ್ಷೆ ಇಟ್ಟುಕೊಂಡವರಿದ್ದಾರೆ. ಅವರಿಗೆ ನಿರಾಶೆ ತರಬೇಡಿ.

ಮಕರ
ಅನಿರೀಕ್ಷಿತ ಬೆಳವಣಿಗೆ ನಿಮಗೆ ಅಚ್ಚರಿ ತಂದೀತು. ನಿರೀಕ್ಷೆ ಕೈಗೂಡದಿದ್ದರೂ ನಿಮ್ಮ ಮನೋಸ್ಥೈರ್ಯಕ್ಕೆ ಭಂಗ ಬಾರದು. ಕೌಟುಂಬಿಕ ಸಹಕಾರ.

ಕುಂಭ
ಇತರರಿಗೆ ಸ್ಫೂರ್ತಿ ತುಂಬುವಿರಿ. ಅವರ ಕಷ್ಟಕ್ಕೆ ಸ್ಪಂದಿಸುವಿರಿ. ಆದರೆ ಇದೇವೇಳೆ, ನಿಮ್ಮ ಸಮಸ್ಯೆಗಳನ್ನು ಕಡೆಗಣಿಸಬೇಡಿ. ಅದಕ್ಕೂ ಪರಿಹಾರ ಹುಡುಕಿ.

ಮೀನ
ಪ್ರೀತಿಪಾತ್ರರೊಂದಿಗೆ ನಿಮ್ಮ ಮನದ ಭಾವನೆ ಹಂಚಿಕೊಳ್ಳಲು ಹಿಂಜರಿಯದಿರಿ. ನಿಮಗೆ ಪೂರಕ ಸ್ಪಂದನೆ ದೊರಕುವುದು. ಮನಸ್ಸಿಗೆ ನಿರಾಳತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!