ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ?

ಮೇಷ
ವ್ಯವಹಾರದಲ್ಲಿ ಕೆಲವು ಅಡ್ಡಿಗಳು. ಅದನ್ನು ನಿಭಾಯಿಸಲು ನೀವು ಸಾಕಷ್ಟು ಪ್ರಯತ್ನ ಪಡಬೇಕಾಗುವುದು. ಕೆಲವರ ಅಸಹಕಾರವೂ ಕಾಡುತ್ತದೆ.

ವೃಷಭ
ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಕುಟುಂಬಸ್ಥರ ಮಧ್ಯೆ ಕಳೆಯಿರಿ. ಅವರ ಬೇಕುಬೇಡಗಳನ್ನು ಆಲಿಸಿರಿ.

ಮಿಥುನ
ದಿನವಿಡೀ ಕೆಲಸದ ಒತ್ತಡ. ಅದರ ಮಧ್ಯೆಯೇ ಭಾವನೆಗಳ ಏರಿಳಿತವನ್ನೂ ಅನುಭವಿಸುವಿರಿ. ಸಣ್ಣ ವಿಷಯಕ್ಕೂ ರೇಗಲು ಹೋಗದಿರಿ.

ಕಟಕ
ನಿಮ್ಮ ಕಾರ್ಯಕ್ಕೆ ಕುಟುಂಬಸ್ಥರ ಅಸಹಕಾರ. ಕೆಲವರ ವರ್ತನೆ ಕೂಡ ಅಸಹನೆ ಮೂಡಿಸಬಹುದು. ಸಂಯಮದಿಂದ ವರ್ತಿಸಿರಿ.

ಸಿಂಹ
ನಿಮ್ಮ ಆತ್ಮವಿಶ್ವಾಸ ಕಠಿಣ ಕಾರ್ಯವನ್ನು ಸಫಲಗೊಳಿಸಲೂ ಕಾರಣವಾಗುತ್ತದೆ. ಆದರೆ ಅತಿರೇಕದಿಂದ ವರ್ತಿಸದಿರಿ. ದುಸ್ಸಾಹಸ ಮಾಡಬೇಡಿ.

ಕನ್ಯಾ
ಕೆಲವು ಹಿನ್ನಡೆ ಅನುಭವಿಸುವಿರಿ. ಆದರೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮುಂದುವರಿಯಿರಿ. ಯಶಸ್ಸು ಖಂಡಿತಾ ನಿಮಗೆ ಸಿಗುವುದು.

ತುಲಾ
ನಿಮ್ಮ ಕಲ್ಪನಾಶಕ್ತಿ ಮೆಚ್ಚುವಂತಹುದು. ಈ ನಿಟ್ಟಿನಲ್ಲಿ ನಿಮ್ಮ ಸಾಧನೆಗೆ ಪುರಸ್ಕಾರವೂ ದೊರಕುವುದು. ಕೌಟುಂಬಿಕ ಸನ್ನಿವೇಶ ಸೌಹಾರ್ದಕರ.

ವೃಶ್ಚಿಕ
ಮನಸ್ಸಿನಲ್ಲೇ ಗೋಪುರ ಕಟ್ಟುವುದನ್ನು ಬಿಡಿ. ಕಾರ್ಯವನ್ನೂ ಎಸಗುವುದು ಮುಖ್ಯ. ಕೆಲಸವೇ ಮಾಡದೆ ಕೊರಗುವುದರಿಂದ ಫಲವಿಲ್ಲ.

ಧನು
ಕುಟುಂಬದ ಕುರಿತು ಹೆಚ್ಚು ಆಸ್ಥೆ ತೋರುವಿರಿ. ಅವರ ಹಿತಾಸಕ್ತಿಗೆ ಹೆಚ್ಚು ಶ್ರಮಿಸುವಿರಿ. ಕುಟುಂಬ ಸದಸ್ಯರಿಂದ ಪೂರಕ ಸ್ಪಂದನೆ ದೊರಕುವುದು. ಆರ್ಥಿಕ ಸುಧಾರಣೆ.

ಮಕರ
ಕೆಲಸದ ಹೊರೆಯನ್ನು ನೀವೊಬ್ಬರೆ ಹೊತ್ತುಕೊಳ್ಳದಿರಿ. ಅದನ್ನು ಇತರರ ಜತೆಗೂ ಹಂಚಿಕೊಳ್ಳಿ. ಭಿನ್ನಮತ ನಿವಾರಿಸಿಕೊಳ್ಳಿ. ಹೊಂದಾಣಿಕೆ ಮುಖ್ಯ.

ಕುಂಭ
ಎಲ್ಲರೊಂದಿಗೆ ಹೊಂದಿಕೊಳ್ಳುವ ನಿಮ್ಮ ಸ್ವಭಾವ ಉತ್ತಮ ಫಲ ನೀಡಲಿದೆ. ಇತರರ ಸಹಕಾರವೂ ದೊರಕುವುದು. ಕೌಟುಂಬಿಕ ಶಾಂತಿ.

ಮೀನ
ಗ್ರಹಗತಿಗಳು ಇಂದು ನಿಮಗೆ ಪೂರಕವಾಗಿವೆ. ಹಾಗಾಗಿ ಎಲ್ಲ ಕಾರ್ಯಗಳಲ್ಲಿ ಯಶಸ್ಸು. ಸಮಸ್ಯೆಗಳು ಪರಿಹಾರ. ಕೌಟುಂಬಿಕ ನೆಮ್ಮದಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!