ದಿನಭವಿಷ್ಯ: ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ? 

ಮೇಷ
ಕಳೆದು ಹೋದುದಕ್ಕೆ ಚಿಂತಿಸಬೇಡಿ. ನಗುತ್ತಲೇ ಕಾರ್ಯವೆಸಗಿ. ಕೌಟುಂಬಿಕ ಬದ್ಧತೆ ಪೂರೈಸಬೇಕಾದ ಒತ್ತಡ.  ಮಾತು ಹದ ತಪ್ಪದಂತೆ ನೋಡಿಕೊಳ್ಳಿ.

ವೃಷಭ
ಸ್ವಂತ ಉದ್ದಿಮೆ ಹೊಂದಿರುವವರಿಗೆ ಪ್ರಗತಿ. ಕೌಟುಂಬಿಕ ನೆಮ್ಮದಿ. ಯಾರನ್ನೂ ದೂರೀಕರಿಸಬೇಡಿ. ಎಲ್ಲರೊಂದಿಗೆ ಹೊಂದಿಕೊಳ್ಳಿ.

ಮಿಥುನ
ಯಶಸ್ಸು ಮತ್ತು ಅದೃಷ್ಟ ನಿಮ್ಮನ್ನು ಅರಸಿ ಬರಲಿದೆ. ಸಣ್ಣಪುಟ್ಟ ಕಿರಿಕಿರಿ ಬಾಧಿಸಿದರೂ ಅದನ್ನು ನಿಭಾಯಿಸುವಿರಿ. ಹಳೆ ಸ್ನೇಹಿತರ ಭೇಟಿ.

ಕಟಕ
ಕೆಲಸದ ಒತ್ತಡವು ಇಂದು ನಿಮ್ಮ ದಿನ ಹಾಳು ಮಾಡಬಹುದು. ಬಯಸಿದ ಕಾರ್ಯ ನೆರವೇರದೆ ಅತೃಪ್ತಿ. ಆತ್ಮೀಯರ ಒಡನಾಟ ತಪ್ಪಬಹುದು.

ಸಿಂಹ
ಅಸಹಜವೆಂದು ಕಂಡ ವ್ಯವಹಾರಕ್ಕೆ ಕೈ ಹಾಕಬೇಡಿ. ಇತರರ ಆಮಿಷಕ್ಕೆ ಮರುಳಾಗಬೇಡಿ. ಎಚ್ಚರದಿಂದ ವರ್ತಿಸಿರಿ. ಕೌಟುಂಬಿಕ ಸಂಘರ್ಷ.

ಕನ್ಯಾ
ಹಣ ಸಂಪಾದನೆಗೆ ಸುಲಭ ದಾರಿ ಹುಡುಕದಿರಿ. ಕಷ್ಟ ಪಟ್ಟರಷ್ಟೇ ಉತ್ತಮ ಪ್ರತಿಫಲ. ಹಿರಿಯರು ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು.

ತುಲಾ
ಉಪಯೋಗಕ್ಕೆ ಬಾರದ ಕೆಲಸದಲ್ಲಿ ತೊಡಗದಿರಿ. ನಿಮ್ಮ ಮನಸ್ಸಿಗೆ ಕೆಲವರಿಂದ ನೋವು ಉಂಟಾದೀತು. ಅದನ್ನು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಳ್ಳದಿರಿ.

ವೃಶ್ಚಿಕ
ನಿಮ್ಮನ್ನು ಕಡೆಗಣಿಸುವ ವ್ಯಕ್ತಿಯ ಕುರಿತಂತೆ ಅತಿಯಾದ ಭಾವುಕತೆ ಅವಶ್ಯವೆ? ಯೋಚಿಸಿ ನೋಡಿ. ಬದುಕಲ್ಲಿ ಮುಂದೆ ಸಾಗಲು ಯತ್ನಿಸಿರಿ.

ಧನು
ನಿಮ್ಮ ಪಾಲಿಗೆ ತೃಪ್ತಿಕರ ದಿನ. ಕೆಲದಿನಗಳಿಂದ ಉಂಟಾಗಿದ್ದ ಅಸಮಾಧಾನ ನಿವಾರಣೆ. ಬಂಧುಗಳಿಂದ ಉತ್ತಮ ಸಹಕಾರ.

ಮಕರ
ವೃತ್ತಿಪರವಾಗಿ ತೃಪ್ತಿಕರ ಬೆಳವಣಿಗೆ. ಕೆಲವು ಕಿರಿಕಿರಿ ಉಂಟಾದರೂ ಅದು ಸುಲಭದಲ್ಲೆ ಪರಿಹಾರ ಕಾಣುವುದು. ಬಿಕ್ಕಟ್ಟೊಂದು ನಿವಾರಣೆ ಆಗುವುದು.

ಕುಂಭ
ನಿಮ್ಮ ಚಿಂತನೆ, ಭಾವನೆಗಳಿಗೆ ಮನ್ನಣೆ ದೊರಕುವುದು. ಹಾಗಾಗಿ ನಿಮ್ಮ ಅಭಿಪ್ರಾಯ ವ್ಯಕ್ತ ಮಾಡಲು ಹಿಂಜರಿಕೆ ತೋರದಿರಿ.

ಮೀನ
ನಿಮ್ಮ ಗುರಿ ಇಂದು ಸಾಧನೆಯಾಗುವುದು. ನಿಮ್ಮ ಯಶಸ್ಸನ್ನು ಎಲ್ಲರೂ ಮೆಚ್ಚುವರು. ಕೌಟುಂಬಿಕ ಭಿನ್ನಮತ ಸೌಹಾರ್ದದಿಂದ ಪರಿಹರಿಸಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!