ಹೊಸದಿಗಂತ ವರದಿ: ಬೆಂಗಳೂರು:
ನಗರದ ಹಲಸೂರುಗೇಟ್ ಠಾಣೆ ವ್ಯಾಪ್ತಿಯ ಕುಂಬಾರಪೇಟೆಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಜೋಡಿ ಕೊಲೆಯಾಗಿದೆ.
ಸುರೇಶ್(55) ಮತ್ತು ಮಹೇಂದ್ರ (68) ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬುಧವಾರ ರಾತ್ರಿ 8.30 ರ ಸುಮಾರಿಗೆ ಕೊಲೆ ಸಂಭವಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಬಾರಪೇಟೆ ಮಾರುತಿಕಾಂಪ್ಲೆಕ್ಸ್‌ನಲ್ಲಿ ಹರೀಶ್, ಈತನ ಸ್ನೇಹಿತ ಹಾರ್ಡ್ ವೇರ್ ಶಾಪ್ ನಡೆಸುತ್ತಾರೆ. ಈ ಕಾಂಪ್ಲೆಕ್ಸ್ ಮಾಲೀಕತ್ವದ ವಿಚಾರದಲ್ಲಿ ಹರೀಶ್ ಹಾಗೂ ಈತನ ಸೋದರ ಸಂಬಂಧಿ ಬದ್ರಿನಾಥ್ ಎಂಬುವವನಿಗೆ ವೈಮನಸ್ಸಿತ್ತು.
ಬುಧವಾರ ರಾತ್ರಿ 7.45 ರಸುಮಾರಿಗೆ ಕಾಂಪ್ಲೆಕ್ಸ್‌ನಲ್ಲಿ ಹರೀಶ್, ಮಹೇಂದ್ರ ಮಾತನಾಡುತ್ತ ಕುಳಿತಿದ್ದ ವೇಳೆ ಬದ್ರಿನಾಥ್ ತೆರಳಿದ್ದ ಮೂವರು ನಡುವೆಯೂ ಆಸ್ತಿ ವಿಚಾರಕ್ಕೆ ಜಗಳ ನಡೆದಿದ್ದು ಬದ್ರಿನಾಥ್, ಮಾರಕಾಸ್ತ್ರದಿಂದ ಹರೀಶ್, ಮಹೇಂದ್ರನಿಗೆ ಮನಸೋ ಇಚ್ಛೆ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬೆರಳಚ್ಚು ಹಾಗೂ ಎಫ್‌ಎಸ್‌ಎಲ್ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಎಚ್.ಕೆ ಶೇಖರ್ ಖುದ್ದು ಸ್ಥಳಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.