ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ?

ಮೇಷ
ಕೆಲವಾರು ಸಮಸ್ಯೆ ಎದುರಿಸುವಿರಿ. ಇತರರು ನಿಮ್ಮ ಸ್ಥೈರ್ಯ ಕುಂದಿಸಲು ಯತ್ನಿಸುವರು. ನಿಮ್ಮ ಆತ್ಮವಿಶ್ವಾಸ ಕುಂದದಂತೆ ನೋಡಿಕೊಳ್ಳಿ.

ವೃಷಭ
ಕಿರಿಕಿರಿಯ ದಿನವಿದು. ಸಣ್ಣ ಪುಟ್ಟ ವಿಷಯಕ್ಕೂ ಸಹನೆ ಕಳಕೊಳ್ಳುವಿರಿ. ನಿಮ್ಮ ಕರ್ತವ್ಯದ ಮೇಲೆ ಗಮನ ಕಡಿಮೆ. ಆಪ್ತರ ಜತೆ ಜಗಳ ಕಾಯಲು ಹೋಗದಿರಿ.

ಮಿಥುನ
ಅವಸರದ ನಿರ್ಧಾರ ಬೇಡಿ. ಅದು ನಿಮಗೆ ನಿರೀಕ್ಷಿತ ಫಲ ನೀಡದು. ಕೆಲವು ಪ್ರಸಂಗ ನಿಮ್ಮ ಸಹನೆ ಪರೀಕ್ಷಿಸಲಿದೆ. ಕೋಪತಾಪ ನಿಯಂತ್ರಿಸಿಕೊಳ್ಳಿ.

ಕಟಕ
ವೃತ್ತಿ ಅಥವಾ ಖಾಸಗಿ ವಿಷಯವೊಂದು ನಿರಾಶೆಗೆ ಕಾರಣವಾಗುವುದು. ಪ್ರೀತಿಪಾತ್ರರ ಜತೆ ಜಗಳ ಉಂಟಾದೀತು. ಭಾವನೆ ನಿಯಂತ್ರಿಸಿ.

ಸಿಂಹ
ಖಾಸಗಿ ಸಂಬಂಧ ಉಳಿಸಿಕೊಳ್ಳಲು ಆದ್ಯತೆ ಕೊಡಿ. ಸಣ್ಣ ವಿಷಯಕ್ಕೂ ಬಾಂಧವ್ಯ ಹಾಳಾಗಲು ಅವಕಾಶ ಕೊಡದಿರಿ. ಆಪ್ತರ ಜತೆ ಹೆಚ್ಚು ಸಮಯ ಕಳೆಯಿರಿ.

ಕನ್ಯಾ
ಸಹೋದ್ಯೋಗಿಗಳ ಜತೆ ಕಟುವಾಗಿ ವರ್ತಿಸದಿರಿ. ಅವರ ವರ್ತನೆ ಅಸಹನೀಯ ಎನಿಸಿದರೆ ನೀವೇ ದೂರ ಸರಿಯಿರಿ. ಆಪ್ತರ ಜತೆ ಮನಸ್ತಾಪ ತಪ್ಪಿಸಿರಿ.

ತುಲಾ
ನಿಮ್ಮ ಅಗತ್ಯ ಅರಿತು ಖರೀದಿಗೆ ಹೊರಡಿ. ಇಲ್ಲವಾದರೆ ಅನವಶ್ಯ ವಸ್ತು ಖರೀದಿಯಿಂದ ಧನವ್ಯಯ. ಮಕ್ಕಳ ಶಿಕ್ಷಣದ ವಿಷಯದಲ್ಲಿ ಚಿಂತೆ ಹೆಚ್ಚಳ.

ವೃಶ್ಚಿಕ
ಉತ್ಸಾಹದ ದಿನ. ಇತರರು ನಿಮ್ಮ ನಿಲುವು ಒಪ್ಪಿಕೊಳ್ಳುವಂತೆ ಮಾಡಲು ಸಫಲರಾಗುವಿರಿ. ವಿದ್ಯಾರ್ಥಿಗಳಿಗೆ ಯಶಸ್ಸು.

ಧನು
ನಿಮ್ಮ ಕಾರ್ಯ ಸಮರ್ಥವಾಗಿ ನಿಭಾಯಿಸುವಿರಿ. ಆದರೂ ಇತರರನ್ನು ಮೆಚ್ಚಿಸಲು ವಿಫಲ. ಕೌಟುಂಬಿಕ ಅಶಾಂತಿ ಕಾಡಬಹುದು.

ಮಕರ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ಸವಾಲಾಗಿ ಸ್ವೀಕರಿಸಿ ನಿಮ್ಮ ಸಾಮರ್ಥ್ಯ ತೋರ್ಪಡಿಸಿ. ಕೆಲವರು ನಿಮ್ಮನ್ನು ತಪ್ಪರ್ಥ ಮಾಡಿಕೊಂಡಾರು.

ಕುಂಭ
ಕೈಗೊಂಡ ಕಾರ್ಯದಲ್ಲಿ ಯಶಸ್ಸು. ಆದರೂ ನಿಮಗೆ ತೃಪ್ತಿಯಿರದು. ಆತ್ಮೀಯರ ವರ್ತನೆ ಬೇಸರ ತರಿಸುವುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ.

ಮೀನ
ಉತ್ಸಾಹ ತುಂಬಿದ ದಿನ. ಬಾಕಿ ಉಳಿದ ಕಾರ್ಯ ಮುಗಿಸುವಿರಿ. ನಿಮ್ಮ ಕ್ರಿಯಾಶೀಲತೆಗೆ ಉತ್ತಮ ಸ್ಪಂದನೆ ದೊರಕುವುದು. ಆರ್ಥಿಕ ಉನ್ನತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!