ದಿನಭವಿಷ್ಯ: ಸೂರ್ಯ ದೇವನ ಕೃಪೆಯಿಂದ ಇಂದು ಯಾವ ರಾಶಿಗೆ ಲಾಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಷ
ಹಳೆಯ ನೆನಪುಗಳು ಕಾಡಬಹುದು. ಹಳಬರ ಭೇಟಿಯೂ ಇದಕ್ಕೆ ಕಾರಣವಾಗುವುದು. ಹಿಂದೆ ಹಾಳಾದ ಸಂಬಂಧ ಸರಿಪಡಿಸಲು ಹಾತೊರೆಯುವಿರಿ.

ವೃಷಭ
ವೃತ್ತಿ ಕ್ಷೇತ್ರದಲ್ಲಿ ನಿಮಗೆ ತೃಪ್ತಿಕರ ಬೆಳವಣಿಗೆ. ಹೊಸ ವಾಹನ ಖರೀದಿಗೆ ಸಕಾಲ. ಆರ್ಥಿಕವಾಗಿ ಉತ್ತಮ ಸ್ಥಿತಿ. ಸಾಮಾಜಿಕ ಗೌರವ ಹೆಚ್ಚಳ.

ಮಿಥುನ
ಹೆಚ್ಚು ಹೊಣೆಗಾರಿಕೆ ಇಲ್ಲದ ನಿರಾಳ ದಿನ. ಕೌಟುಂಬಿಕ ಸಮ್ಮಿಲನ.ಬಾಕಿ ಇರುವ ಕಾರ್ಯ ಮುಗಿಸಿ. ಖರ್ಚು ನಿಯಂತ್ರಿಸಲು ಗಮನ ಕೊಡಿ.

ಕಟಕ
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದೆ ನಿರಾಶೆ. ಆಧ್ಯಾತ್ಮಿಕ ವಿಚಾರಗಳತ್ತ ಆಸಕ್ತಿ ಹುಟ್ಟಬಹುದು. ಕಾಲು ನೋವಿನ ಸಮಸ್ಯೆ ಕಾಡಬಹುದು.

ಸಿಂಹ
ಖಾಸಗಿ ಬದುಕಿಗೆ ಸಂಬಂಧಿಸಿ ಮುಖ್ಯ ನಿರ್ಧಾರ ತಾಳಬೇಕಾದ ದಿನ. ಆತ್ಮೀಯರ ಜತೆ ಭಿನ್ನಮತ ಸಂಭವ.ಮಾನಸಿಕ ಒತ್ತಡದಿಂದ ಅನಾರೋಗ್ಯ.

ಕನ್ಯಾ
ಇಂದು ತೆಗೆದುಕೊಳ್ಳುವ  ನಿರ್ಧಾರ ಫಲಪ್ರದ ಆಗಲಿದೆ. ಕೌಟುಂಬಿಕ ಬಿಕ್ಕಟ್ಟು ಶಮನ. ಆರೋಗ್ಯದಲ್ಲಿ ಸುಧಾರಣೆ. ಆರ್ಥಿಕ ಉನ್ನತಿ.

ತುಲಾ
ನಿಮ್ಮ ಕ್ರಿಯಾಶೀಲತೆ ಎಲ್ಲರ ಮೆಚ್ಚುಗೆ ಗಳಿಸಲಿದೆ. ಸಂಜೆಯ ಸಮಯವನ್ನು ಆಪ್ತರ ಜತೆ ಕಳೆಯುವ ಸದವಕಾಶ. ಕೌಟುಂಬಿಕ ಒಡನಾಟ.

ವೃಶ್ಚಿಕ
ಖಾಸಗಿ ಬದುಕಲ್ಲಿ ಏರುಪೇರು. ಕೆಲವಾರು ವಿಷಯ ಇತ್ಯರ್ಥ ಮಾಡಬೇಕಾದ ಧಾವಂತ. ಕೆರಿಯರ್‌ನಲ್ಲಿ ಉನ್ನತಿಗೆ ಅವಕಾಶ. ಅದನ್ನು ಸದುಪಯೋಗಪಡಿಸಿ.

ಧನು
ಹೆಚ್ಚುವರಿ ಕೌಟುಂಬಿಕ ಹೊಣೆಗಾರಿಕೆ ಇಂದು ನಿಭಾಯಿಸಬೇಕು. ಕೆಲವರ ಅಸಹಕಾರ ಎದುರಿಸುವಿರಿ. ಮಾನಸಿಕ ಬೇಗುದಿ ಹೆಚ್ಚುವುದು.

ಮಕರ
ಯಶಸ್ವಿ ದಿನ. ಇಂದಿನ ಕಾರ್ಯೋದ್ದೇಶ ಪೂರೈಸುವಿರಿ. ನಿಮ್ಮ ಮತ್ತು ಕುಟುಂಬದ ಹಿತಾಸಕ್ತಿಗೆ ಬೇಕಾದ ಕ್ರಮಗಳಲ್ಲಿ ಸಫಲತೆ ದೊರಕುವುದು.

ಕುಂಭ
ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆ ಅತಿ ಮುಖ್ಯ. ಅದನ್ನು ನೀವಿಂದು ಅರಿಯಬೇಕು. ಇತರರ ಭಾವನೆಗೆ ಸ್ಪಂದಿಸಬೇಕು. ರೇಗುವಿಕೆ ಸಲ್ಲದು.

ಮೀನ
ಜಗತ್ತಿನ ಸೌಂದರ್ಯ ಆಸ್ವಾದಿಸುವ ಮನಸ್ಥಿತಿ ನಿಮ್ಮದು. ಸಣ್ಣ ವಿಷಯದಲ್ಲೂ ಕುಶಿ ಕಾಣುವಿರಿ. ಇತರರ ನೋವು ನಲಿವಿಗೆ ಸ್ಪಂದಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!