ದಿನಭವಿಷ್ಯ: ಇಂದು ಯಾವ ರಾಶಿಗೆ ಅದೃಷ್ಟ ಒಲಿದು ಬರಲಿದೆ

ಮೇಷ
ನಿಮ್ಮ ಕಾರ್ಯಕ್ಕೆ ವಿಘ್ನ ಎದುರಾಗುವುದು. ಅಪರಿಚಿತರ ಜತೆ ವ್ಯವಹಾರದಲ್ಲಿ ಎಚ್ಚರ ಇರಲಿ. ನಿಮ್ಮ ಕೆಲಸಕ್ಕೆ ಟೀಕೆ ಬಂದರೆ ಸ್ಫೂರ್ತಿ ಯಿಂದ ಸ್ವೀಕರಿಸಿ.

ವೃಷಭ
ನಿಮಗೆ ಪೂರಕ ದಿನ. ಕಾರ್ಯದಲ್ಲಿ ಸಫಲತೆ. ಕುಟುಂಬದ ಜತೆ ಹೆಚ್ಚು ಕಾಲ ಕಳೆಯಿರಿ. ಮಕ್ಕಳ ಹಿತಾಸಕ್ತಿಯ ಕುರಿತು ಹೆಚ್ಚು ಕಾಳಜಿಯನ್ನು ವಹಿಸಿರಿ.

ಮಿಥುನ
ನಿಮ್ಮ ಮಾನಸಿಕ ದೃಢತೆ ಯಾವುದೇ ಕಾರ್ಯ ಪೂರೈಸಲು ಆಸ್ಪದ ಕಲ್ಪಿಸುವುದು. ಕೆಲವು ವಿಷಯಗಳಲ್ಲಿ ನೀವು ಬದಲಾಗಬೇಕಾದ ಅಗತ್ಯವಿದೆ.

ಕಟಕ
ದೈಹಿಕವಾಗಿ ಮತ್ತು ಮಾನಸಿಕವಾಗಿ ಇಂದು ಹೆಚ್ಚು ಬಸವಳಿಯುವಿರಿ. ಆರೋಗ್ಯದಲ್ಲಿ ಏರುಪೇರು ಕಂಡಬಂದೀತು. ವಿಶ್ರಾಂತಿ ಅಗತ್ಯವಿದೆ.

ಸಿಂಹ
ಉತ್ಸಾಹಪೂರ್ಣ ದಿನ. ಅಡ್ಡಿ ಆತಂಕ ಬಾಧಿಸದು. ನಿಮ್ಮ ಬಾಹ್ಯರೂಪಿನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಿ. ಅದು ಇತರರ ಮೆಚ್ಚುಗೆ ಪಡೆಯಲಿದೆ.

ಕನ್ಯಾ
ಕೆಲಸದ ಒತ್ತಡ. ಹಾಗೆಂದು ಅದರ ಕುರಿತೇ ಅತಿಯಾಗಿ ಚಿಂತಿಸಬೇಡಿ. ಅದರ ಚಿಂತೆಯಲ್ಲಿ ಇನ್ನಿತರ ಸಂತೋಷದ ಕ್ಷಣವನ್ನು ಕಳೆದುಕೊಳ್ಳಬೇಡಿ.

ತುಲಾ
ನಿಮ್ಮ ಸಾಮಾಜಿಕ, ಆರ್ಥಿಕ ಮತ್ತು ವೈಯಕ್ತಿಕ ಬದ್ಧತೆಗಳನ್ನು ಇಂದು ಪೂರೈಸಿರಿ. ಅದನ್ನು ಬಾಕಿ ಇಡಬೇಡಿ. ಆಪ್ತರ ಸಹಕಾರ ಲಭ್ಯ.

ವೃಶ್ಚಿಕ
ಇತರರ ಗಮನ ಸೆಳೆಯಲು ಬಯಸುವಿರಿ. ನಿಮ್ಮ ಸಾಧನೆಯೇ ಇತರರನ್ನು ನಿಮ್ಮೆಡೆಗೆ ಸೆಳೆಯಲಿದೆ. ಮಕ್ಕಳು ಹರಿತ ವಸ್ತುಗಳ ಜತೆ ಆಡದಂತೆ ನೋಡಿಕೊಳ್ಳಿ.

ಧನು
ಹಲವಾರು ಪ್ರಮುಖ ಬೆಳವಣಿಗೆ ಇಂದು ಸಂಭವಿಸುವುದು. ಬಹುತೇಕ ಎಲ್ಲವೂ ನಿಮಗೆ ಪೂರಕವಾಗಿದ್ದು ಸಂತೋಷವನ್ನೆ ಉಂಟುಮಾಡಲಿವೆ.

ಮಕರ
ಭಾವನಾತ್ಮಕ ಏರುಪೇರು ಉಂಟಾದೀತು. ಕೌಟುಂಬಿಕ ಬೆಳವಣಿಗೆ ಅದಕ್ಕೆ ಕಾರಣ. ನಿಮ್ಮ ಆರೋಗ್ಯದ ಕಾಳಜಿ ವಹಿಸಲು ಮರೆಯಬೇಡಿ.

ಕುಂಭ
ನಿಮ್ಮ ವ್ಯವಹಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ಸೂಕ್ತ ಕಾಲ. ಎಲ್ಲವೂ ನಿಮಗೆ ಅನುಕೂಲವಾಗಿ ಸಾಗಲಿದೆ. ಅನವಶ್ಯ ಚಿಂತೆ ಬಿಟ್ಟುಬಿಡಿ.

ಮೀನ
ಕುಟುಂಬ ಸದಸ್ಯರ ಜತೆ ಪ್ರಯಾಣದ ಸಾಧ್ಯತೆ ಇದೆ. ಬಂಧುಮಿತ್ರರ ಭೇಟಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚು ಏಕಾಗ್ರತೆ ವಹಿಸಬೇಕು. ಧನವ್ಯಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!