ದಿನಭವಿಷ್ಯ: ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ?

ಮೇಷ
ಸಮಸ್ಯೆಯಿದ್ದರೆ ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳಿ. ಅದನ್ನು ದೀರ್ಘಕಾಲ ಎಳೆಯದಿರಿ. ಇತರರ ಸಹಕಾರ ಪಡೆಯಲು ಹಿಂಜರಿಕೆ ಬೇಡ. ಆರ್ಥಿಕ ಒತ್ತಡ ಹೆಚ್ಚು.

ವೃಷಭ
ಕೆರಿಯರ್‌ಗೆ ಸಂಬಂಧಿಸಿ ಉತ್ತಮ ಅವಕಾಶ.  ವೃತ್ತಿಯಲ್ಲಿ ನಿಮಗೆ ಅನುಕೂಲ ಬೆಳವಣಿಗೆ. ಕೌಟುಂಬಿಕ ಬಿಕ್ಕಟ್ಟು ಮನಸ್ಸಿನ ನೆಮ್ಮದಿ ಕಲಕಬಹುದು.

ಮಿಥುನ
ಕುಟುಂಬಕ್ಕೆ ಸಂಬಂಧಿಸಿದ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ದಿನ. ಎಲ್ಲವೂ ನಿಮಗೆ ಅನುಕೂಲಕರವಾಗಿ ನಡೆಯುವುದು.

ಕಟಕ
ಆರಾಮವಾಗಿ ಇರಲು ಅವಕಾಶ ಸಿಗುವುದಿಲ್ಲ. ಏನಾದರೊಂದು ಕಿರಿಕಿರಿ ಬಾಧಿಸಬಹುದು. ಗುರಿ ಸಾಧಿಸಲು ಧೈರ್ಯದ ಕೊರತೆ. ದೃಢ ಮನಸ್ಸು ರೂಪಿಸಿಕೊಳ್ಳಿ.

ಸಿಂಹ
ಆರ್ಥಿಕ ಸ್ಥಿತಿ ತೃಪ್ತಿಕರ. ಉಳಿತಾಯದ ಅವಕಾಶವೂ ಲಭ್ಯ. ಕುಟುಂಬದಲ್ಲಿ ಸಂತೋಷದ ವಾತಾವರಣ. ವೃತ್ತಿಯ ಕಿರಿಕಿರಿ ನಿವಾರಣೆ.

ಕನ್ಯಾ
ಕೆಲಸದಲ್ಲಿ ಪ್ರಗತಿ. ನಿಮ್ಮ ನಿರ್ವಹಣೆ ಬಗ್ಗೆ  ಮೇಲಧಿಕಾರಿಯ ಮೆಚ್ಚುಗೆ. ಇತರರ ಪ್ರೋತ್ಸಾಹ
ಪಡೆಯುವಿರಿ. ಆರ್ಥಿಕ ಸುಧಾರಣೆ.

ತುಲಾ
ಆತ್ಮವಿಶ್ವಾಸ ಹೆಚ್ಚಿ ಸುವ ಬೆಳವಣಿಗೆ. ಕಷ್ಟವೆಂದುಕೊಂಡಿದ್ದ ಕಾರ್ಯವೊಂದು ಸುಲಭದಲ್ಲಿ  ಮುಗಿಯಲಿದೆ. ಗೆಳೆಯರ ಸಹಕಾರ.

ವೃಶ್ಚಿಕ
ಆಪ್ತರ  ಜತೆಗಿನ ವಿರಸವನ್ನು ಸಮಾಧಾನದಿಂದ ಪರಿಹರಿಸಿಕೊಳ್ಳಿ. ಹಣಕಾಸು ಸ್ಥಿತಿ ಉತ್ತಮ. ದೈಹಿಕ ಮತ್ತು ಮಾನಸಿಕ ನೆಮ್ಮದಿ.

ಧನು
ವೃತ್ತಿಪರ ಒತ್ತಡ ಹೆಚ್ಚು. ಮಾಡಿದ ಕೆಲಸ ಸರಿಯಾಗಿಲ್ಲವೆಂಬ ದೂರು ಕೇಳುವಿರಿ. ಇತರರ ಟೀಕೆಗೆ ತಲೆ ಕೆಡಿಸಿಕೊಳ್ಳಬೇಡಿ. ಆತ್ಮವಿಶ್ವಾಸವಿರಲಿ.

ಮಕರ
ಇಂದು ವೃತ್ತಿಯಲ್ಲಿ ಹಾಗೂ ಕೌಟುಂಬಿಕ ಹೊಣೆಗಾರಿಕೆ ತುಸು ಹೆಚ್ಚಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸು ವುದು. ದೈಹಿಕ ಸಮಸ್ಯೆ ನಿವಾರಣೆ.

ಕುಂಭ
ಮಾನಸಿಕ ಒತ್ತಡ.  ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾದೀತು. ಆಪ್ತರ ಜತೆ  ಭಿನ್ನಮತ ಸಂಭವ. ಮಾತು- ಕೃತಿಯಲ್ಲಿ  ಸಹನೆಯಿರಲಿ.

ಮೀನ
ವೃತ್ತಿಯಲ್ಲಿ ನಿಮ್ಮ ಹೊಣೆಯನ್ನು ಸಮರ್ಥವಾಗಿ, ನಿಭಾಯಿಸುವಿರಿ. ಹಾಗಾಗಿ ಯಾವುದೇ ಸಮಸ್ಯೆ ಉದ್ಭವಿಸದು. ಸಾಂಸಾರಿಕ ಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!