ಮೇಷ
ನೀವು ಸಾಧಿಸ ಬಯಸುವ ಗುರಿ ಸನಿಹ ವಾಗಲಿದೆ. ಕಷ್ಟಗಳು ಎದುರಾದರೂ ಅವು ಪರಿಹಾರ ಕಾಣುವವು. ನೆರವು ಕೇಳಲು ಹಿಂಜರಿಯದಿರಿ.
ವೃಷಭ
ಅಹಂ ಬದಿಗಿಟ್ಟು ವ್ಯವಹರಿಸಿದರೆ ಕಾರ್ಯದಲ್ಲಿ ಸಫಲತೆ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುವುದು. ಆರ್ಥಿಕ ಸಂಕಷ್ಟ ನಿವಾರಣೆ, ಧನಪ್ರಾಪ್ತಿ.
ಮಿಥುನ
ಕೌಟುಂಬಿಕ ಸಂಬಂಧ ಉತ್ತಮ. ಭಿನ್ನಮತ ನಿವಾರಣೆ. ವೃತ್ತಿಯಲ್ಲಿ ಕಂಡುಬಂದ ಬಿಕ್ಕಟ್ಟು ಪರಿಹಾರದ ಲಕ್ಷಣ ತೋರಲಿದೆ. ಇತರರ ಸಹಕಾರ ಲಭ್ಯ.
ಕಟಕ
ಕೆಲಸದ ಒತ್ತಡದಿಂದ ತುಸು ಹೊರಬಂದು ನಿಮ್ಮ ಮೆಚ್ಚಿನ ಹವ್ಯಾಸದಲ್ಲಿ ತೊಡಗಿ. ಅದರಲ್ಲಿ ಸಂತೋಷ ಕಾಣುವಿರಿ. ಕೌಟುಂಬಿಕ ಸಮ್ಮಿಲನ.
ಸಿಂಹ
ಕುಟುಂಬ ಸದಸ್ಯರ ಜತೆ ಭಿನ್ನಮತ, ವಾಗ್ವಾದ ಏರ್ಪಡಬಹುದು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ.
ಕನ್ಯಾ
ಕಠಿಣ ಹೊಣೆಗಾರಿಕೆ ಹೆಗಲೇರಿದರೂ ಸಹೋದ್ಯೋಗಿಗಳ ಉತ್ತಮ ಸಹಕಾರ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಪ್ರತಿಕೂಲ ಬೆಳವಣಿಗೆ.
ತುಲಾ
ಸಾಂಸಾರಿಕ ಬದುಕಿನಲ್ಲಿ ತುಸು ಉದ್ವಿಗ್ನತೆ ಉಂಟಾದೀತು. ಸಹನೆಯಿಂದ ವರ್ತಿಸುವುದು ಅವಶ್ಯ. ಇದರಿಂದ ವೃತ್ತಿಯ ಮೇಲೂ ಪರಿಣಾಮ.
ವೃಶ್ಚಿಕ
ಸಹೋದ್ಯೋಗಿಗಳ ಜತೆ ಸಂವಹನ ಕೊರತೆಯಿಂದ ಬಿಕ್ಕಟ್ಟು ಏರ್ಪಟ್ಟೀತು. ಪ್ರತಿಕೂಲ ಪರಿಸ್ಥಿತಿಗೆ ಎದೆಗುಂದದಿರಿ. ಧೈರ್ಯದಿಂದ ಅದನ್ನು ಎದುರಿಸಿ.
ಧನು
ಕಠಿಣ ದುಡಿಮೆ ಇಂದು ನಿಮ್ಮದು. ಅದರ ಫಲವೂ ಸಿಹಿಯಾಗಿಯೇ ಇರುವುದು. ಭಾವನಾತ್ಮಕ ಏರುಪೇರು ಅನುಭವಿಸುವಿರಿ.
ಮಕರ
ವೃತ್ತಿಯಲ್ಲಿ ಹೆಚ್ಚು ಜವಾಬ್ದಾರಿ. ನಿಮ್ಮ ಸಾಮರ್ಥ್ಯದ ಕುರಿತು ವಿಶ್ವಾಸವಿರಲಿ. ಸ್ನೇಹಿತರ ಜತೆ ಕಾಲ ಕಳೆಯುವ ಅವಕಾಶ. ಆಹಾರ ಹಿತಮಿತವಾಗಿರಲಿ.
ಕುಂಭ
ಮನೆಯಲ್ಲಿ ಶಾಂತಿ, ಸೌಹಾರ್ದ. ವೃತ್ತಿಯಲ್ಲಿ ಕೂಡ ಸಮಾಧಾನದ ಬೆಳವಣಿಗೆ. ನಿಮ್ಮ ಕೆಲಸವು ಇತರರಿಂದ ಮೆಚ್ಚುಗೆ ಪಡೆಯುವುದು.
ಮೀನ
ಕೆಲ ವಿಷಯಗಳಲ್ಲಿ ನಿಮ್ಮ ನಿಲುವಿಗೇ ಅಂಟಿಕೊಳ್ಳುವ ಮೂಲಕ ಮನೆಯಲ್ಲಿನ ಶಾಂತಿ ಕದಡದಿರಿ. ಹೊಂದಾಣಿಕೆ ಕೂಡ ಮುಖ್ಯ , ಅರಿಯಿರಿ.