Wednesday, November 30, 2022

Latest Posts

ಸ್ಥಳೀಯ ತಿನಿಸುಗಳಿಗೆ ಪ್ರಾಶಸ್ತ್ಯ: IRCTCಯಿಂದ ಹೀಗೊಂದು ವಿಶಿಷ್ಟ ಪ್ರಯತ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಿಜ್ಜಾ, ಬರ್ಗರ್‌ ಎನ್ನುತ್ತ ಆರೋಗ್ಯಕರವಲ್ಲದ ಪಾಶ್ಚಾತ್ಯ ಆಹಾರ ಪದ್ಧತಿಗಳನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಿರೋ ಹೊತ್ತಲ್ಲಿ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ಪ್ರಾದೇಶಿಕ ಪಾಕಪದ್ಧತಿ, ಋತುಮಾನದ ಭಕ್ಷ್ಯಗಳು ಮತ್ತು ಹಬ್ಬಗಳ ಸಮಯದಲ್ಲಿ ವಿಶೇಷ ತಿಂಡಿ ತಿನಿಸುಗಳನ್ನು ಪರಿಚಯಿಸಲು ಯೋಚಿಸಿದೆ.

ಸಸ್ಯಾಹಾರಿ ಮತ್ತು ಮಾಂಸಾಹಾರಿ ವಿಭಾಗದಲ್ಲಿ ಸೀಮಿತ ಆಯ್ಕೆಗಳ ಮೆನುವಿನ ಬದಲಾಗಿ, IRCTC ಈಗ ಪ್ರಯಾಣಿಕರಿಗೆ ರಾಜಧಾನಿ, ಡುರೊಂಟೊ, ಶತಾಬ್ದಿ ಮತ್ತು ವಂದೇ ಭಾರತ್‌ನಂತಹ ಸೂಪರ್‌ಫಾಸ್ಟ್ ಮತ್ತು ಪ್ರೀಮಿಯರ್ ರೈಲುಗಳಲ್ಲಿ ಪ್ರತ್ಯೇಕ ಭಕ್ಷ್ಯಗಳನ್ನು ಆರ್ಡರ್ ಮಾಡಲು ಅವಕಾಶಗಳನ್ನು ಒದಗಿಸಲಿದೆ.

ಹೊಸ ಮೆನುವಿನಲ್ಲಿ ಪ್ರಾದೇಶಿಕ ಆಹಾರ ಹಾಗೂ ಆಯಾ ಕಾಳಮಾನಕ್ಕೆ ತಕ್ಕಂತೆ ಆಹಾರ ಪದಾರ್ಥಗಳಲ್ಲಿ ಬದಲಾವಣೆಗಳನ್ನು ಮಾಡಲು ಚಿಂತಿಸಿದೆ. ಅಲ್ಲದೇ ಪ್ರಯಾಣಿಕರ ಆದ್ಯತೆಯ ಮೇರೆಗೆ ಮಧುಮೇಹಿ ಆಹಾರ, ಮಗುವಿನ ಆಹಾರ, ರಾಗಿ ಆಧಾರಿತ ಸ್ಥಳೀಯ ಉತ್ಪನ್ನಗಳು ಸೇರಿದಂತೆ ಆರೋಗ್ಯ ಆಹಾರ ಆಯ್ಕೆಗಳನ್ನೂ ಕೂಡ ಒದಗಿಸಲಿದೆ. ಆ ಮೂಲಕ ಆರೋಗ್ಯಕರ ಆಹಾರ ಪದ್ದತಿಯನ್ನು ಉತ್ತೇಜಿಸುವುದರ ಜೊತೆಗೆ ಸ್ಥಳೀಯ ತಿನಿಸುಗಳಿಗೆ ಪ್ರಾಶಸ್ತ್ಯ ಒದಗಿಸುವತ್ತ IRCTC ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!