HEALTH | 30ರ ನಂತರ ಪ್ರೆಗ್ನೆನ್ಸಿ: ರಿಸ್ಕ್‌ಗಳೇನು? ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ…

ತಾಯ್ತನ ಬಹುತೇಕ ಎಲ್ಲಾ ಹೆಣ್ಣುಮಕ್ಕಳ ಕನಸು. ಕೆಲವರಿಗೆ ಅದು ಕನಸು ಅಲ್ಲದೇ ಇದ್ದರು ಸಂದರ್ಭ ಬಂದಾಗ ಖುಷಿಯಿಂದ ಅಪ್ಪುತ್ತಾರೆ. ಎಲ್ಲೋ ಕೆಲವರು ಮಕ್ಕಳ ಖುಷಿ ಪರಮೋಚ್ಛ ಸುಖ ಎಂದು ಒಪ್ಪೋದಿಲ್ಲ.

When Is It Safe for My Baby to Sleep with a Blanket?ಈಗೆಲ್ಲಾ ಹಿಂದಿನಂತಿಲ್ಲ, 19 ಕ್ಕೆ ಮದುವೆ ಮೊದಲ ಆನಿವರ್ಸರಿಗೆ ದೇವರಿಗೆ ಅರ್ಚನೆ ಮಾಡಿಸುವಾಗ, ಮಗನೋ, ಮಗಳ ಹೆಸರೋ ಹೇಳುತ್ತಾರೆ. ಆದರೆ ಈಗ 28ಕ್ಕೆ ಮದುವೆ, ಎರಡು ವರ್ಷದಲ್ಲಿ ಯಾರೇ ‘ಯಾವಾಗ ಗುಡ್‌ನ್ಯೂಸ್’ ಎಂದು ಕೇಳಿದರೂ, ಇನ್ನೆರಡು ವರ್ಷ ಬಿಟ್ಟು ಯೋಚನೆ ಮಾಡ್ತೀವಿ ಅನ್ನೋ ಮಾತು..

When do babies laugh out loud? - MOM News Dailyಹೀಗೆ ಅಂದು, ಹಾಗೆ ಹೋಗುವುದರೊಳಗೆ ಎರಡು ವರ್ಷ ಕಳೆದೇ ಹೋಗುತ್ತದೆ. ದುಡ್ಡಿಲ್ಲ, ಕಾರ್ ಇಲ್ಲ, ಮಗು ನೋಡ್ಕೋಳೋಕೆ ಯಾರೂ ಇಲ್ಲ, ಕರಿಯರ್ ಈಗಿನ್ನ ಸೆಟ್ ಆಗ್ತಾ ಇದೆ, ದಪ್ಪ ಆಗ್ತೇನೆ, ಗಂಡನಿಗೆ ಇಷ್ಟ ಇಲ್ಲ, ಹೆಂಡತಿಗೆ ಈಗಲೇ ಮಗು ಬೇಡ, ಅಣ್ಣನ ಮಗು ಬರಲಿ  ನಂತರ ನಮ್ಮದು, ಮಕ್ಕಳ ಕಿರಕಿರಿ ತಡ್ಕೊಳಕ್ಕೆ ಆಗಲ್ಲ, ಮಗು ಆದಮೇಲೆ ಜೀವನ ಬದಲಾಗುತ್ತದೆ, ಟ್ರಿಪ್ ಮಾಡೋಕಾಗಲ್ಲ, ಗಂಡನ ಪ್ರೀತಿ ಡಿವೈಡ್ ಆಗತ್ತೆ.. ಹೀಗೆ ಮತ್ತೊಂದು ಮಗದೊಂದು ಕಾರಣಗಳು..

How to make your baby laugh | Baby 0 to 12 months | Bountyಆದರೆ ಒಂದು ದಿನ ಪಾರ್ಕ್‌ನಲ್ಲಿ ಯಾರದ್ದೋ ಮಗು ಖುಷಿಯಿಂದ ಕುಪ್ಪಳಿಸೋದು ನೋಡಿದಾಗ, ಪುಟ್ಟ ಲಾಲಿಪಾಪ್‌ಗೆ ಮಗು ಮುಖದಲ್ಲಿ ಮೂಡೋ ಮಂದಹಾಸ, ಆಗಿನ್ನೂ ಹುಟ್ಟಿದ ಮಗುವಿನ ಮೃದು ಸ್ಪರ್ಶ, ಮಕ್ಕಳ ಕ್ರೀಂ, ಪೌಡರ್, ಸೋಪ್ ವಾಸನೆ ನಿಮ್ಮನ್ನು ಅಲುಗಾಡಿಸುತ್ತದೆ. ನಮಗೂ ಮಗು ಬೇಕು ಎನ್ನುವ ಆಸೆ ಬಿತ್ತುತ್ತವೆ!

When Do Babies Start Laughing? 4 Ways to Make Your Baby Laugh and Moreಮೂವತ್ತರ ನಂತರ ಮೊಟ್ಟೆಗಳ ಗುಣಮಟ್ಟ ಕಡಿಮೆಯಾಗುತ್ತಾ ಬರುತ್ತದೆ. ಈ ಕಾರಣದಿಂದ ಗರ್ಭಪಾತದ ಸಾಧ್ಯತೆ ಹೆಚ್ಚಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಇನ್ನಿತರ ಸಮಸ್ಯೆಗಳು ಬಾಧಿಸುತ್ತದೆ.

5 Signs Your Baby Is Angry, Because It Isn't Always Easy To Tellಮೂವತ್ತರ ನಂತರ ಮಗು ಮಾಡಿಕೊಂಡರೆ ಪ್ರಯೋಜನಗಳು ಕೂಡ ಇವೆ..

  • 20  ವರ್ಷಕ್ಕಿಂತ 30 ವರ್ಷದಲ್ಲಿ ನಿಮ್ಮ ದೈಹಿಕ ಸ್ಥಿತಿ ಪಕ್ವವಾಗಿರುತ್ತದೆ. ನೂರಾರು ಕಾರಣಕ್ಕೆ ದೇಹ ಗಟ್ಟಿಯಾಗಿರುತ್ತದೆ. ಆರೋಗ್ಯಕರ ತಾಯ್ತನ ನಿಮ್ಮದಾಗಬಹುದು.
  • ಆರೋಗ್ಯಕರ ಜೀವನಶೈಲಿ ನಿಮ್ಮದಾಗಿರುತ್ತದೆ. ನಿಮ್ಮ ದೇಹಕ್ಕ ಏನು ಬೇಕು, ಏನು ಬೇಡ. ಯಾವ ಆಹಾರ ನಿಮಗೆ ಸೆಟ್ ಆಗುತ್ತದೆ. ಜಂಕ್ ಯಾಕೆ ತಿನ್ನಬಾರದು, ಉತ್ತಮ ಕ್ವಾಲಿಟಿ ಆಹಾರ ಖರೀದಿಸುವ ಅಭ್ಯಾಸ ನಿಮ್ಮದಾಗಿರುತ್ತದೆ.
  • ಆರ್ಥಿಕವಾಗಿ ಸಬಲರಾಗಿರುತ್ತೀರಿ. 20 ವರ್ಷದವರಿದ್ದಾಗ ಬರುತ್ತಿದ್ದ ಸಂಬಳಕ್ಕೂ ಈಗ ಬರುತ್ತಿರುವ ಸಂಬಳಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಮನೆ,ಕಾರ್, ಸಂಬಳ ಎಲ್ಲವೂ ನಿಮ್ಮದಾಗಿರುತ್ತದೆ.

    Going out without the kids: A simple how-to for parents || Going out without  the kids: A simple how-to for parents

ಅಪಾಯಗಳೇನು?

  • ಗರ್ಭಪಾತ ಆಗುವ ಸಾಧ್ಯತೆ ಹೆಚ್ಚು
  • ಒಂದು ಗರ್ಭಪಾತ ಆದರೆ, ಮತ್ತೆ ಮತ್ತೆ ಗರ್ಭಪಾತ ಆಗುವ ಸಾಧ್ಯತೆಗಳಿವೆ.
  • ಮಕ್ಕಳಲ್ಲಿ ಕ್ರೋಮೋಸೋಮ್ ಸಮಸ್ಯೆಯಿಂದ ಬಾಧಿಸುವ ಡೌನ್ ಸಿಂಡ್ರೋಮ್ ಕಾಣಿಸಬಹುದು.
  • ಟ್ವಿನ್ಸ್ ಆಗುವ ಸಾಧ್ಯತೆ ಹೆಚ್ಚು, ಸೇಫ್ ರೀತಿಯಲ್ಲಿ ಅಲ್ಲ. ಪ್ರೀಮೆಚ್ಯೂರ್ ಬರ್ತ್, ಕಡಿಮೆ ತೂಕ ಇರುವ ಮಕ್ಕಳ ಜನನ ಸಾಧ್ಯತೆ

    Miscarriage Symptoms & Signs, Causes, Treatment & Support | Health Plus

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!