ಅಯ್ಯೋ ಈ ತಿಂಗಳು ನನ್ನ ಪೀರಿಯಡ್ಸ್ ಮಿಸ್ ಆಗಿದೆ. ಇನ್ನೂ ಪೀರಿಯಡ್ಸ್ ಯಾಕಾಗಿಲ್ಲ? ಅನ್ನೋ ಪ್ರಶ್ನೆಗಳು ನಿಮ್ಮನ್ನ ಕಾಡ್ತಿದೆಯಾ?. ಯಾವಾಗ್ಲೂ ಒಂದೇ ಟೈಮ್ ಗೆ ಪೀರಿಯಡ್ಸ್ ಆಗ್ತಿಲ್ಲವ? ಏನು ಟೆನ್ಶನ್ ಮಾಡ್ಕೋಬೇಡಿ ಯಾಕಂದ್ರೆ ಅದಿಕ್ಕೆ ರೀಸನ್ ಇದೆ. ಅದು ಏನು ಅಂತ ಮುಂದೆ ಓದಿ….
ಸಾಮಾನ್ಯವಾಗಿ ಮಹಿಳೆಯರಲ್ಲಿ ಪೀರಿಯಡ್ಸ್ 28-35 ದಿನಗಳೊಳಗೆ ಆಗುತ್ತೆ. ಕೆಲವೊಮ್ಮೆ ಲೇಟ್ ಆಗ್ಬಹುದು ಅಥವಾ ಸಂಪೂರ್ಣವಾಗಿಯೂ ನಿಂತು ಹೋಗಬಹುದು. ಇದಕ್ಕೆಲ್ಲ ಏನು ಕಾರಣ ಅಂತ ನೋಡೋಣ.
ಪ್ರೆಗ್ನನ್ಸಿ
ಮದುವೆಯಾದ ಹೆಂಗೆಳೆಯರಿಗೆ ಮೊದಲು ಬರುವ ಯೋಚನೆಯೇ ಇದು. ಪೀರಿಯಡ್ಸ್ ಆಗದಿರಲು ಇರುವ ಪ್ರಮುಖ ಕಾರಣ ಪ್ರೆಗ್ನನ್ಸಿಯಾಗಿರಬಹುದು.
ಸ್ಟ್ರೆಸ್
ನೀವು ಹೆಚ್ಚಿನ ಸ್ಟ್ರೆಸ್ ತೆಗೆದುಕೊಳ್ಳುವುದರಿಂದ ಹಲವಾರು ಬಾರಿ ನಮ್ಮ ಪೀರಿಯಡ್ಸ್ ಸೈಕಲ್ ನಲ್ಲಿ ವ್ಯತ್ಯಾಸ ಆಗುತ್ತೆ. ಸ್ಟ್ರೆಸ್ ನಮ್ಮ ಮೆದುಳಿನ ಹೈಪೋಥಾಲಮಸ್ ಭಾಗವನ್ನು ಪ್ರಭಾವಿತಗೊಳಿಸಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗಿ ಪೀರಿಯಡ್ಸ್ ಹೆಚ್ಚು ಕಮ್ಮಿಯಾಗತ್ತೆ.
ವೆಯಿಟ್ ಫ್ಲಕ್ಚುಯೇಷನ್
ತೂಕದಲ್ಲಿ ತೀವ್ರ ಏರುಪೇರಾಗೋದು ದೇಹದ ಹಾರ್ಮೋನ್ ಸಮತೋಲನ ಅಸ್ಥಿರಗೊಳ್ಳುತ್ತದೆ. ಇದರಿಂದ ಪೀರಿಯಡ್ಸ್ ಬೇಗ ಬರೋದು ಅಥವಾ ಲೇಟ್ ಆಗೋದು ಆಗುತ್ತೆ.
ಅಧಿಕ ತೂಕ
ನಮ್ಮ ದೇಹದ ತೂಕ ಹೆಚ್ಚಾಗಿ ಇನ್‌ಸುಲಿನ್ ಮಟ್ಟದ ಏರುಪೇರುಗಳಿಂದ ಹಾರ್ಮೋನ್ ಗೆ ತೊಂದರೆಯಾದಾಗ.
ಕಡಿಮೆ ತೂಕ
ದೇಹದ ತೂಕ ಕಡಿಮೆಯಾದಾಗ ದೇಹಕ್ಕೆ ಬೇಕಾದ ಈಸ್ಟ್ರೋಜೆನ್ ಉತ್ಪಾದನೆ ಕಡಿಮೆಯಾಗಿ ಪೀರಿಯಡ್ಸ್ ನಲ್ಲಿ ವ್ಯತ್ಯಾಸವಾಗಬಹುದು.
ಹಾರ್ಮೋನಲ್ ಇಂಬ್ಯಾಲೆನ್ಸ್
ಮಹಿಳೆಯರ ದೇಹದಲ್ಲಿ ಹಾರ್ಮೋನ್ಸ್ ಸಮತೋಲನದಲ್ಲಿರಬೇಕು. ಆದ್ರೆ ಕೆಲವೊಮ್ಮೆ ಸಾಂಕ್ರಾಮಿಕ ಅಥವಾ ಅನುವಂಶಿಕ ಕಾರಣದಿಂದ ವ್ಯತ್ಯಾಸ ಆದಾಗ ಪೀರಿಯಡ್ಸ್ ನಲ್ಲಿ ತೊಂದರೆ ಆಗಬಹುದು.
ಪಿಸಿಒಎಸ್
ಈ ಸಮಸ್ಯೆಯಲ್ಲಿ ಅಂಡಾಶಯದಲ್ಲಿ ಪುರುಷ ಹಾರ್ಮೋನ್ ಹೆಚ್ಚಾಗಿ ಉತ್ಪತ್ತಿಯಾಗುತ್ತವೆ, ಹೀಗಾಗಿ ಪೀರಿಯಡ್ಸ್ ನಲ್ಲಿ ಅಸಮತೋಲನವಾಗಬಹುದು.
ಕಠಿಣ ವ್ಯಾಯಾಮ
ಹೆಚ್ಚು ಶಾರೀರಿಕ ಶ್ರಮ ಅಥವಾ ಕಠಿಣ ವ್ಯಾಯಾಮದ ಅಭ್ಯಾಸವು ದೇಹದ ಇಸ್ಟ್ರೋಜನ್ ಮಟ್ಟವನ್ನು ತಗ್ಗಿಸಿ ಪೀರಿಯಡ್ಸ್ ನಲ್ಲಿ ವ್ಯತ್ಯಾಸ ತರುತ್ತದೆ.
ಔಷಧಿಗಳ ಪ್ರಭಾವ
ಕೆಲವು ಔಷಧಿಗಳು, ವಿಶೇಷವಾಗಿ ಗರ್ಭನಿರೋಧಕ ಮಾತ್ರೆಗಳು, ರಕ್ತದೊತ್ತಡದ ಔಷಧಿಗಳು ಹಾರ್ಮೋನ್ ಮಟ್ಟದ ಬದಲಾವಣೆಗೆ ಕಾರಣವಾಗುತ್ತದೆ. ಇದರಿಂದ ಪೀರಿಯಡ್ಸ್ ಹೆಚ್ಚು ಕಮ್ಮಿ ಆಗೋ ಸಾಧ್ಯತೆ ಇದೆ.