Tuesday, March 28, 2023

Latest Posts

SHOCKING | ಮಗಳ ಬ್ಯಾಗ್‌ನಲ್ಲಿ ಪ್ರೆಗ್ನೆನ್ಸಿ ಕಿಟ್ : ಹೆತ್ತವರೇ ಆಸಿಡ್ ಹಾಕಿ ಕ್ರೂರವಾಗಿ ಕೊಂದರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಗಳ ಬ್ಯಾಗ್‌ನಲ್ಲಿ ಪ್ರೆಗ್ನೆನ್ಸಿ ಕಿಟ್‌ಗಳನ್ನು ನೋಡಿದ ಪೋಷಕರು ಆಸಿಡ್ ಹಾಕಿ ಆಕೆಯನ್ನು ಭೀಕರವಾಗಿ ಕೊಂದಿದ್ದಾರೆ.

ಉತ್ತರಪ್ರದೇಶದ ಕೌಶಂಬಿಯ ಟೆನ್‌ಷಾ ಅಲಮಾಬಾದ್‌ನಲ್ಲಿ ಘಟನೆ ನಡೆದಿದ್ದು, ಮಗಳ ಬ್ಯಾಗ್‌ನಲ್ಲಿ ಸಾಕಷ್ಟು ಪ್ರೆಗ್ನೆನ್ಸಿ ಕಿಟ್‌ಗಳನ್ನು ನೋಡಿದ ನರೇಶ್ ಹಾಗೂ ಶೋಭಾ, ಮಗಳು ಸಂಬಂಧ ಹೊಂದಿದ್ದಾಳೆ ಎಂದು ಆಕೆಯ ಮೇಲೆ ಆಸಿಡ್ ಸುರಿದು ಕೊಲೆ ಮಾಡಿದ್ದಾರೆ.

ಮಗಳನ್ನು ಕೊಲ್ಲಲು ಸಂಬಂಧಿಕರು ಸಾಥ್ ನೀಡಿದ್ದಾರೆ, ಮಗಳ ಶವವನ್ನು ಕಾಲುವೆಗೆ ಎಸೆದು, ಮಗಳು ಮಿಸ್ಸಿಂಗ್ ಎಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣದ ತನಿಖೆ ವೇಳೆ ಕಾಲುವೆಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ತೀವ್ರ ವಿಚಾರಣೆ ನಂತರ ಕೊಲೆ ಬಹಿರಂಗವಾಗಿದೆ. ಆಕೆ ಬರೀ ಹುಡುಗರ ಜೊತೆ ಮಾತನಾಡುತ್ತಿದ್ದಳು, ಸಾಕಷ್ಟು ಕಿಟ್‌ಗಳನ್ನು ಬ್ಯಾಗ್‌ನಲ್ಲಿ ನೋಡಿದ್ದೆವು. ಮರ್ಯಾದಿಗೆ ಅಂಜಿ ಕೊಂದಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!