ಹೊಸದಿಗಂತ ಡಿಜಿಟಲ್ ಡೆಸ್ಕ್:
ಗರ್ಭಿಣಿಯೋರ್ವರು ಯುದ್ಧ ಬಾಧಿತ ಗಾಜಾದಲ್ಲಿ ಬರೋಬ್ಬರಿ ಐದು ಕಿಲೋ ಮೀಟರ್ ದೂರ ನಡೆದು ನಾಲ್ಕು ಮಕ್ಕಳಿಗೆ ಜನ್ಮನೀಡಿದ್ದಾಳೆ.
ಈ ಘಟನೆ ಉತ್ತರ ಪ್ಯಾಲೆಸ್ಟೀನಿಯನ್‌ನಲ್ಲಿ ನಡೆದಿದೆ. ಇಮಾನ್ ಅಲ್-ಮಸ್ರಿ ಎಂಬ ಮಹಿಳೆ ತನ್ನ ಮನೆಯಿಂದ ಐದು ಕಿಮೀ ದೂರದಲ್ಲಿರುವ ದಕ್ಷಿಣ ಗಾಜಾದ ಆಸ್ಪತ್ರೆಗೆ ಹೆರಿಗೆಗಾಗಿ ತೆರಳಬೇಕಿತ್ತು. ಆದರೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಆಕೆ ನಡೆದೇ ಹೋಗಿದ್ದಾಳೆ.
ಸದ್ಯ ಇಮಾನ್, ಡೀರ್ ಅಲ್-ಬಾಲಾಹ್‌ನಲ್ಲಿರುವ ಇಕ್ಕಟ್ಟಾದ ಶಾಲೆಯಲ್ಲಿ ಆಶ್ರಯ ಪಡೆದಿದ್ದು, ಜನ್ಮ ನೀಡಿದ ನಾಲ್ಕರಲ್ಲಿ ಮೂರು ಮಕ್ಕಳು ಆರೋಗ್ಯವಾಗಿವೆ. ಮತ್ತೊಂದು ಮಗು ಕೇವಲ ಎರಡು ಕೆ.ಜಿ ತೂಕವಿದ್ದು, ಬದುಕುಳಿಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರಿಂದ ಆಕೆ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಬಂದಿದ್ದಾಳೆ.