ನಿಜಕ್ಕೂ ʼಸ್ಪೂರ್ಥಿʼ ಈ ಕಂದ, ಇಸ್ರೇಲ್‌ ದಾಳಿಯಲ್ಲಿ ಮೃತಪಟ್ಟ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಿರಾಕಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಿನ್ನೆ ರಾತ್ರಿ ಗಾಜಾದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ಗರ್ಭಿಣಿ, ಪತಿ ಹಾಗೂ ಮಕ್ಕಳು ಕೂಡ ಮೃತಪಟ್ಟಿದ್ದು, ತುಂಬು ಗರ್ಭಿಣಿ ಹೊಟ್ಟೆಯಲ್ಲಿದ್ದ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ಮಗು ತಂದೆ, ತಾಯಿ, ಕುಟುಂಬದವರು ಪ್ರೀತಿಯಿಲ್ಲದೆ ಜಗತ್ತಿದೆ ಕಾಲಿಟ್ಟಿದೆ. 1.4 ಕೆಜಿ ತೂಕದ ಹೆಣ್ಣುಮಗುವನ್ನು ಸಿಸೇರಿಯನ್‌ ಮೂಲಕ ಹೊರತರಲಾಗಿದೆ. ಸದ್ಯ ಮಗುವಿನ  ಆರೋಗ್ಯ
ಸುಧಾರಿಸುತ್ತಿದ್ದು, ಇನ್ಕ್ಯುಬೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾಕ್ಟರ್ ಮೊಹಮ್ಮದ್ ಸಲಾಮ್ ತಿಳಿಸಿದ್ದಾರೆ.


ಶಿಶುವಿನ ತಾಯಿ ಗರ್ಭ ಧರಿಸಿ 30 ವಾರಗಳಾಗಿತ್ತು ಎಂದು ತಿಳಿದು ಬಂದಿದೆ. ಮಗುವಿನ ಹೊಟ್ಟೆ ಮೇಲೆ ಹಾಕಿರುವ ಬ್ಯಾಂಡ್ ಮೇಲೆ ‘The baby of the martyr Sabreen Al-Sakani’ ಎಂದು ಬರೆಯಲಾಗಿದೆ.

ಕೊಲ್ಲಲ್ಪಟ್ಟ ಸಾಕಾನಿಯ ಮತ್ತೊಬ್ಬ ಮಗಳು ತನ್ನ ಸಹೋದರಿಗೆ ʼರೂಹ್‌ʼ ಎಂದು ಹೆಸರಿಡಲು ನಿರ್ಧರಿಸಿದ್ದರು ಎನ್ನಲಾಗಿದೆ. ಅರೆಬಿಕ್ ಭಾಷೆಯ ಈ ಪದವು ಸ್ಫೂರ್ತಿ ಎಂದು ಸೂಚಿಸುತ್ತದೆ ಎಂದು ಮಗುವಿನ ಚಿಕ್ಕಪ್ಪ ಹೇಳಿದ್ದಾರೆ. ಇನ್ನೂ ನಾಲ್ಕು ವಾರ ಇನ್ಕ್ಯುಬೇಟರ್‌ನಲ್ಲಿಟ್ಟು ತೂಕ ಹೆಚ್ಚಳವಾದ ನಂತರ ಚಿಕ್ಕಪ್ಪ, ಅಜ್ಜಿ ತಾತನ ಬಳಿ ಮಗುವನ್ನು ಒಪ್ಪಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!