ಹೊಸದಿಗಂತ ಡಿಜಿಟಲ್ ಡೆಸ್ಕ್;
ಬಾಲಿವುಡ್ ನಟಿ ಪ್ರೀತಿ ಜಿಂಟಾ ಕೇರಳ ಕಾಂಗ್ರೆಸ್ ವಿರುದ್ಧ ಕಿಡಿ ಕಾಯ್ದಿದ್ದಾರೆ. ಇದಕ್ಕೆ ಕಾರಣ ಮಾಡಿರುವ ಒಂದು ಟ್ವೀಟ್.
ಹೌದು, ಕೇರಳ ಕಾಂಗ್ರೆಸ್ ಮಾಡಿರುವ ಟ್ವೀಟ್ನಲ್ಲಿ ಪ್ರೀತಿ ಝಿಂಟಾ ಮಾಡಿದ್ದ 18 ಕೋಟಿ ಸಾಲವನ್ನು ಬಿಜೆಪಿ ಪಕ್ಷ ಮನ್ನಾ ಮಾಡಿದೆ, ಇದಕ್ಕಾಗಿ ಪ್ರೀತಿ ಝಿಂಟಾ, ಬಿಜೆಪಿಯ ಗುಣಗಾನ ಮಾಡುತ್ತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿತ್ತು. ಕೇರಳ ಕಾಂಗ್ರೆಸ್ನ ಈ ಟ್ವೀಟ್ಗೆ ಪ್ರೀತಿ ಝಿಂಟಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ನ್ಯೂ ಇಂಡಿಯಾ ಕೋ ಅಪರೇಟೀವ್ ಬ್ಯಾಂಕ್ನಲ್ಲಿ ನಟಿ ಸಾಲ ಪಡೆದಿದ್ದರು. ತುಂಬಾ ವರ್ಷಗಳ ಹಿಂದೆ ಪ್ರೀತಿ ಜಿಂಟಾ ಪಡೆದಿದ್ದ ಸಾಲದ ಬಗ್ಗೆ ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ನಟಿ ಪ್ರೀತಿ ಜಿಂಟಾ, ಮುಂಬೈನ ನ್ಯೂ ಇಂಡಿಯಾ ಕೋ ಅಪರೇಟೀವ್ ಬ್ಯಾಂಕ್ನಲ್ಲಿ ಪ್ರೀತಿ ಜಿಂಟಾ ಸಾಲ ಮಾಡಿದ್ದರು. ಅದು ಮನ್ನಾ ಆಗಿದೆ. ಪ್ರತಿಯಾಗಿ ಪ್ರೀತಿ ಜಿಂಟಾರ ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನು ಬಿಜೆಪಿ ಹ್ಯಾಂಡಲ್ ಮಾಡ್ತಿದೆ ಎಂದು ಕೇರಳ ಕಾಂಗ್ರೆಸ್ ಆರೋಪಿಸಿತ್ತು.
ಕಾಂಗ್ರೆಸ್ ಆರೋಪಕ್ಕೆ ಸಿಟ್ಟಿಗೆದ್ದಿರುವ ಪ್ರೀತಿ ಜಿಂಟಾ, ನಾನು ನನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ಅಪರೇಟ್ ಮಾಡುತ್ತಿದ್ದೇನೆ. ಫೇಕ್ ನ್ಯೂಸ್ ಪ್ರಮೋಟ್ ಮಾಡುತ್ತಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ನನ್ನ ಯಾವುದೇ ಸಾಲವನ್ನು ಯಾರೂ ಕೂಡ ರೈಟ್ ಆಫ್ ಮಾಡಿಲ್ಲ. ರಾಜಕೀಯ ಪಕ್ಷ, ಅವರ ಪ್ರತಿನಿಧಿಗಳು ಫೇಕ್ ನ್ಯೂಸ್ ಪ್ರಮೋಟ್ ಮಾಡುತ್ತಿರುವುದಕ್ಕೆ ಶಾಕ್ ಆಗಿದೆ. ರಾಜಕೀಯ ಪಕ್ಷ ನನ್ನ ಹೆಸರು, ಫೋಟೋ ಬಳಸಿಕೊಂಡು ಗಾಸಿಪ್, ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದೆ. ನಾನು ಸಾಲ ಪಡೆದಿದ್ದೆ, 10 ವರ್ಷದ ಹಿಂದೆಯೇ ಅದನ್ನು ಮರುಪಾವತಿ ಮಾಡಿದ್ದೇನೆ. ಭವಿಷ್ಯದಲ್ಲಿ ಈ ಬಗ್ಗೆ ಯಾವುದೇ ತಪ್ಪು ಕಲ್ಪನೆ ಬೇಡ ಎಂದು ತಿರುಗೇಟು ನೀಡಿದ್ದಾರೆ.