ಶಿಮ್ಲಾದ ಹತೇಶ್ವರಿ ಮಾತಾ ದೇವಸ್ಥಾನಕ್ಕೆ ಪತಿ, ಮಕ್ಕಳ ಜೊತೆ ಪ್ರೀತಿ ಜಿಂಟಾ ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬಾಲಿವುಡ್​ ನಟಿ ಪ್ರೀತಿ ಜಿಂಟಾ ಅವರು ತಮ್ಮ ಪತಿ ಜೀನ್​ ಗುಡೆನಫ್ ಮತ್ತು ಪುಟಾಣಿ ಮಕ್ಕಳಾದ ಜೈ ಮತ್ತು ಗಿಯಾ ಜೊತೆ ಶಿಮ್ಲಾದ ಹತೇಶ್ವರಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದರು.

ಈಗ ನಾನು ತಾಯಿಯಾಗಿದ್ದೇನೆ. ನನ್ನ ಮಕ್ಕಳು ಮೊದಲ ಬಾರಿಗೆ ಭೇಟಿ ನೀಡಿದ ಈ ದೇವಾಲಯವು ಅದ್ಭುತ ಮತ್ತು ಪುರಾತನವಾಗಿದೆ. ನಮ್ಮ ಭೇಟಿಯ ಸ್ನೀಕ್​ ಪೀಕ್​ ಇಲ್ಲಿದೆ. ಜೈ ಮತ್ತು ಗಿಯಾ ಈ ಪ್ರವಾಸವನ್ನು ನೆನೆಪಿನಲ್ಲಿಟ್ಟುಕೊಳ್ಳುವುದಿಲ್ಲ. ಹೀಗಾಗಿ ನಾವು ಮತ್ತೊಮ್ಮೆ ಇಲ್ಲಿಗೆ ಬರಬೇಕಾಗುತ್ತದೆ. ಆ ತಾಯಿ ನಮ್ಮನ್ನು ಖಂಡಿತ ಕರೆಸಿಕೊಳ್ಳುತ್ತಾರೆ. ಜೈ ಮಾ ದುರ್ಗಾ, ಜೈ ಮಹಿಷಾಸುರಮರ್ಧಿನಿ. ನಿಮ್ಮಲ್ಲಿ ಯಾರಿಗಾದರೂ ಈ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶ ಸಿಕ್ಕಿದರೆ ಖಂಡಿತ ತಪ್ಪಿಸಿಕೊಳ್ಳಬೇಡಿ. ಇದು ಅತ್ಯಂತ ಸುಂದರವಾಗಿದೆ. ಹೀಗಾಗಿ ನೀವು ಭೇಟಿ ನೀಡಿದ ನಂತರ ನನಗೆ ಧನ್ಯವಾದ ಹೇಳಬಹುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!