November 17, 2026
Tuesday, November 17, 2026
spot_img

ಸದ್ದಿಲ್ಲದೇ ಒಟಿಟಿಗೆ ಎಂಟ್ರಿ ಕೊಟ್ಟ ಪ್ರೇಮದ ಊರಲಿ ಸಿನಿಮಾ: ಎಲ್ಲಿ ಸ್ಟ್ರೀಮಿಂಗ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಕನ್ನಡದ ಸಿನಿಮಾ ಪ್ರೇಮದ ಊರಲಿ ಸದ್ದಿಲ್ಲದೇ ಇದೀಗ ಒಟಿಟಿಗೆ ಎಂಟ್ರಿ ನೀಡಿದೆ. ಹಾಡು, ನಟನೆ, ಹಳ್ಳಿ ಸೊಗಡಿನಿಂದ ಜನರ ಮನಸ್ಸನ್ನು ಗೆದ್ದಿದ್ದ ಈ ಸಿನಿಮಾ ಥಿಯೇಟರ್‌ನಲ್ಲಿ ಬರೋಬ್ಬರಿ ಇನ್ನೂರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಸಿನಿಮಾ ಬಜೆಟ್‌ ಬರೀ ಎರಡು ಕೋಟಿ ಅನ್ನೋದು ಸ್ಪೆಷಲ್‌ ವಿಷಯ. ಇತ್ತೀಚೆಗಷ್ಟೇ ತೆರೆಕಂಡ ಬಿಗ್‌ ಬಜೆಟ್‌ ಸಿನಿಮಾ ರಾಮಾಯಣ ಸಿನಿಮಾ ಥಿಯೇಟರ್‌ಗಳಿಗೆ ಅಪ್ಪಳಿಸಿದ ನಂತರ ಪ್ರೇಮದ ಊರಲಿ ಸಿನಿಮಾ ಹವಾ ಕೊಂಚ ಇಳಿಕೆಯಾಗಿತ್ತು. ಈ ಕಾರಣದಿಂದ ಸಿನಿಮಾವನ್ನು ಒಟಿಟಿಗೆ ನೀಡಲಾಗಿದೆ.

ಬೆಳ್ಳಿಪರದೆಯ ಮೇಲೆ ಲಕ್ಷಾಂತರ ಅಭಿಮಾನಿಗಳನ್ನು ರಂಜಿಸಿದ ‘ಪ್ರೇಮದ ಊರಲಿ’ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜಾಗತಿಕ ಮಟ್ಟದ ಮುಂಚೂಣಿ ಒಟಿಟಿ ಸಂಸ್ಥೆಯಾದ ಪ್ರೈಮ್ ವಿಡಿಯೋ ಅತ್ಯುತ್ತಮ ಮೊತ್ತಕ್ಕೆ ಪಡೆದುಕೊಂಡಿದೆ. ಮುಂಬರುವ ನವೆಂಬರ್ 17 ರಿಂದ ಈ ಸಿನಿಮಾ ಪ್ರೈಮ್ ವಿಡಿಯೋ ವೇದಿಕೆಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದವರಿಗೂ ಹಾಗೂ ಒಟಿಟಿ ವೀಕ್ಷಕರಿಗೂ ಮನೆಯಲ್ಲಿಯೇ ಕುಳಿತು ಈ ಅದ್ಭುತ ಪ್ರಣಯ ಕಥೆ ಆನಂದಿಸುವ ಸುವರ್ಣ ಅವಕಾಶ ದೊರೆತಂತಾಗಿದೆ.

https://twitter.com/Sathya_Tweetz/status/2122533052748623936/photo/1?ref_src=twsrc%5Etfw%7Ctwcamp%5Etweetembed%7Ctwterm%5E2122533052748623936%7Ctwgr%5Eb1cf760674e04c9a0f1ff0a0b639730ab5ed5c20%7Ctwcon%5Es1_&ref_url=https%3A%2F%2Fwww.kannadaprabha.com%2Fcinema%2Fnews%2F2026%2FNov%2F17%2Fpremada-oorali-makes-surprise-ott-debut-on-amazon-prime-video

ಇಂದಿನಿಂದಲೇ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರರು ಈ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸಬಹುದು. ಕನ್ನಡ ಸಿನಿಮಾಗಳಿಗೆ ಒಟಿಟಿ ವೇದಿಕೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯ ನಡುವೆಯೇ ‘ಪ್ರೇಮದ ಊರಲಿ’ ಡಿಜಿಟಲ್ ಬಿಡುಗಡೆಯಾಗಿದೆ. ಇದೀಗ ಸಿನಿಮಾ ನೋಡಿದವರು ಮತ್ತೊಮ್ಮೆ ನೋಡಬಹುದು, ನೋಡಲು ಆಗದವರು ಮನೆಯಲ್ಲಿಯೇ ಕುಳಿತು ಫಿಲಂ ವೀಕ್ಷಣೆ ಮಾಡಬಹುದಾಗಿದೆ.

Must Read