ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಹತ್ತು ದಿನಗಳ ನಡೆಯುವ ಚಳಿಗಾಲದ ಅಧಿವೇಶನದ ಭದ್ರತೆಗಾಗಿ ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಎಲ್ಲಾ ಭದ್ರತಾ ಸಿಬ್ಬಂದಿಗೂ ಊಟ, ವಸತಿ ಸೌಕರ್ಯ ಕಲ್ಪಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸಿಬ್ಬಂದಿ ಸಜ್ಜಾಗಿದ್ದಾರೆ. ಈ ಬಾರಿ ಹೆಚ್ಚಿನ ಪ್ರತಿಭಟನೆಗಳು ನಡೆಯುವ ನಿರೀಕ್ಷೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ.
ಭದ್ರತಾ ಸಿಬ್ಬಂದಿಗೆ ಟೌನ್‌ಶಿಪ್ ನಿರ್ಮಾಣ
ಅಧಿವೇಶನಕ್ಕೆ ನಿಯೋಜಿಸಿರುವ ಐದು ಸಾವಿರ ಸಿಬ್ಬಂದಿಗೂ ವಿಧಾನಸೌಧದ ಬಳಿಯೇ ವಸತಿಗಾಗಿ ಟೌನ್‌ಶಿಪ್ ನಿರ್ಮಿಸಲಾಗಿದೆ. ಇದರಲ್ಲಿ ಏಳು ಟೆಂಟ್‌ಗಳನ್ನು ಹಾಕಿದ್ದು, ಒಂದೊಂದರಲ್ಲಿ ಕನಿಷ್ಟ 400-500ಮಂದಿ ಉಳಿದುಕೊಳ್ಳಬಹುದಾಗಿದೆ. ಊಟೋಪಚಾರಕಾಗಿ 28 ಪ್ರತ್ಯೇಕ ಕೌಂಟರ್ ಸ್ಥಾಪಿಸಲಾಗಿದ್ದು, ಪ್ರತಿಯೊಬ್ಬ ಸಿಬ್ಬಂದಿಗೂ ಕಾಟ್, ಹಾಸಿಗೆ, ಸ್ನಾನಕ್ಕೆ ಬಿಸಿ ನೀರು, ಮೊಬೈಲ್ ಚಾರ್ಜಿಂಗ್ ಸೌಲಭ್ಯ ಸೇರಿದಂತೆ ಎಲ್ಲಾ ವ್ಯವಸ್ಥೆ ಕಲ್ಪಸಲಾಗಿದೆ.
ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವ್ಯವಸ್ಥೆ
ಅಧಿವೇಶನಕ್ಕೆ ನಿಯೋಜನೆಗೊಂಡಿರುವ ಮಹಿಳಾ ಸಿಬ್ಬಂದಿಗೂ ಊಟ, ವಸತಿ, ಸೌಕರ್ಯ ಕಲ್ಪಿಸಲಾಗಿದ್ದು, ಕೆಎಸ್ಆರ್‌ಪಿ ಮಚ್ಛೆ ಘಟಕದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಬೆಳಗಾವಿಯಾದ್ಯಂತ ಪೊಲೀಸರ ಹದ್ದಿನ ಕಣ್ಣು
ಈ ಅಧಿವೇಶನ ಸಮಯದಲ್ಲಿ ಎಂಇಎಸ್ ಪುಂಡಾಟಿಕೆ, ಖ್ಯಾತೆ ತೆಗೆಯುವುದು ಸಾಮಾನ್ಯ. ಜಿಲ್ಲೆಯಲ್ಲಿ ಯಾಔಉದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಹದ್ದಿನ ಕಣ್ಣಿಟ್ಟಿದೆ. ಇಷ್ಟೆ ಅಲ್ಲದೆ ಅಧಿವೇಶನಕ್ಕೆ ಯಾವುದೇ ಪ್ರತಿಭಟನೆಯ ಬಿಸಿ ಉಂಟಾಗದಂತೆ ಪೊಲೀಸ್ ಬಿಗಿ ಭದ್ರತೆ ವಹಿಸಿದೆ. ಈಗಾಗಲೇ ಅಧಿವೇಶನ ಒಂದು ಕಿಲೋ ಹೊರಗಡೆ ಪ್ರತಿಭಟನಾಕಾರರಿಗೆ ಟೆಂಟ್ ವ್ಯವಸ್ಥೆ ಕೂಡ ಮಾಡಲಾಗಿದೆ.