ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಬಳಿಕ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ನಡೆಸಲು ಭರದ ಸಿದ್ದತೆಗಳು ನಡೆಯುತ್ತಿದ್ದು, ಎಲ್ಲ ಹೋಟೆಲ್ನವರು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೊಟೇಲ್ಗಳಲ್ಲಿ ಸಿಸಿಕ್ಯಾಮರಾ ಅಳವಡಿಸಬೇಕು. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ಕ್ರಿಮಿನಲ್ ಹಿನ್ನೆಲೆಯುಳ್ಳವರು ಬಂದಾಗ ಗಮನ ಹರಿಸುವಂತೆ ಹೊಟೇಲ್ ಮಾಲಿಕರಿಗೆ ಸೂಚಿಸಿದ್ದಾರೆ.
ಹೊಟೇಲ್, ಪಬ್ ಮತ್ತು ಕ್ಲಬ್ ಮಾಲೀಕರೊಂದಿಗೆ ಸಭೆ ನಡೆಸಿದ ಅವರು, ಡಿ.31ರಂದು ಹೊಸ ವರ್ಷಾಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಸುರಕ್ಷತಾ ಕ್ರಮಗಳ ಬಗ್ಗೆ ಹೋಟೆಲ್ನವರಿಗೆ ಮಾರ್ಗದರ್ಶನ ಮಾಡಿದ್ದೇವೆ. ಹೋಟೆಲ್ನವರು ನಮಗೆ ಕೆಲವು ಸಲಹೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ವಾಹನಗಳ ದಟ್ಟಣೆಯಾಗದಂತೆ ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಜನದಟ್ಟಣೆ ನಿರ್ವಹಣೆ, ವಿದ್ಯುತ್ ಸಮಸ್ಯೆ ಬಗ್ಗೆ ಗಮನ ಹರಿಸಲು ಸೂಚಿಸಿದ್ದೇವೆ.ಕ್ರಿಮಿನಲ್ ಹಿನ್ನಲೆ ಇದ್ದರೆ ಅಂತವರ ಬಗ್ಗೆ ಗಮನ ಹರಿಸೋಕೆ ಸೂಚಿಸಿದ್ದೇವೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.