ಅಸ್ಸಾಂನ ಕಾಜಿರಂಗದಲ್ಲಿ ಗಜ್ ಉತ್ಸವ ಉದ್ಘಾಟಿಸಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮರ್ಮು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಸ್ಸಾಂ ಭೇಟಿಯ ಎರಡನೇ ದಿನವಾದ ಇಂದು ಕಾಜಿರಂಗದಲ್ಲಿ ಗಜ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಅಸ್ಸಾಂ ಸರ್ಕಾರವು ಗಜ್ ಉತ್ಸವ 2023 ಅನ್ನು ವಿಶ್ವ ಪರಂಪರೆಯ ತಾಣವಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಜೆಕ್ಟ್ ಎಲಿಫೆಂಟ್‌ನ 30 ವರ್ಷಗಳ ಯಶಸ್ಸನ್ನು ಆಚರಿಸಲು ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಭಾರತವು ಅಂದಾಜು 32 ಸಾವಿರ ಆನೆಗಳನ್ನು ಹೊಂದಿದೆ. ಆನೆಗಳ ಆವಾಸಸ್ಥಾನ ಮತ್ತು ಕಾರಿಡಾರ್‌ಗಳನ್ನು ರಕ್ಷಿಸಲು ಪ್ರಾಜೆಕ್ಟ್ ಎಲಿಫೆಂಟ್ ಅನ್ನು 1991-92 ರಲ್ಲಿ ಪ್ರಾರಂಭಿಸಲಾಯಿತು. ಮಾನವ-ಆನೆ ಸಂಘರ್ಷವನ್ನು ಪರಿಹರಿಸುವುದು ಯೋಜನೆಯ ಇನ್ನೊಂದು ಗುರಿಯಾಗಿದೆ.

ಎರಡು ದಿನಗಳ ಗಜ್ ಉತ್ಸವದ ಸಂದರ್ಭದಲ್ಲಿ ಆನೆ ಸಂರಕ್ಷಣೆ ಕುರಿತು ವಿಚಾರ ಸಂಕಿರಣಗಳನ್ನೂ ಆಯೋಜಿಸಲಾಗುತ್ತಿದೆ.

ಅಸ್ಸಾಂ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗೌಹಾಟಿ ಹೈಕೋರ್ಟ್‌ನ ಪ್ಲಾಟಿನಂ ಜುಬಿಲಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಗುವಾಹಟಿ ತಲುಪಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!