ಪ್ರಧಾನಿಗಳ ಮ್ಯೂಸಿಯಂ ನ ಮೋದಿ ಗ್ಯಾಲರಿಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿಗಳ ಮ್ಯೂಸಿಯಂ ನಲ್ಲಿ ನರೇಂದ್ರ ಮೋದಿ ಗ್ಯಾಲರಿಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಭೇಟಿ ನೀಡಿದ್ದಾರೆ . ಈ ಮೂಲಕ ಭೇಟಿ ನೀಡಿದ ಮೊದಲ ಸಂದರ್ಶಕರಾಗಿದ್ದಾರೆ.

ಈ ವೇಳೆ ಸಂಗ್ರಹಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ. ‘ಇಲ್ಲಿಗೆ ಬಂದು ಸಂಗ್ರಹಾಲಯದ ವಿವಿಧ ಗ್ಯಾಲರಿಗಳನ್ನು ನೋಡುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಹೆಮ್ಮೆ ಪಡುತ್ತಾನೆ ಎಂದು ನನಗೆ ಮನವರಿಕೆಯಾಗಿದೆ’ ಎಂದು ಅವರು ಬರೆದಿದ್ದಾರೆ.

ಜ.16 ರಿಂದ ಸಾರ್ವಜನಿಕ ಭೇಟಿಗೆ ಮುಕ್ತವಾಗಲಿರುವ ಮ್ಯೂಸಿಯಂನ ನರೇಂದ್ರ ಮೋದಿ ಗ್ಯಾಲರಿಗೆ ಭೇಟಿ ನೀಡಿದ ಮೊದಲ ಸಂದರ್ಶಕರೆಂಬ ಖ್ಯಾತಿಗೆ ಮುರ್ಮು ಭಾಜನರಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಕೃತಿ ಇಲಾಖೆ, ಪ್ರಧಾನಮಂತ್ರಿ ಸಂಗ್ರಹಾಲಯ ಮತ್ತು ‘ಅಲ್ಲಿನ ಪ್ರದರ್ಶನಗಳನ್ನು ಆಳವಾದ ಆಸಕ್ತಿಯಿಂದ ನೋಡಿದ್ದಾರೆ’ ಎಂದು ಹೇಳಿದೆ. ಒಂದುವರೆ ಗಂಟೆಯ ಭೇಟಿ ವೇಳೆಯಲ್ಲಿ ಮುರ್ಮು ಅವರು, ಸಂವಿಧಾನ ಗ್ಯಾಲರಿಗೂ ಭೇಟಿ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!