ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳನೇ ಆವೃತ್ತಿಯ ಜಲಸಪ್ತಾಹಕ್ಕೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಲಿದ್ದಾರೆ. ಮಂಗಳವಾರ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್‌ನಲ್ಲಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯವು ಜಾಗೃತಿ ಮೂಡಿಸುವ ಮತ್ತು ಸಂರಕ್ಷಿಸುವ ಮತ್ತು ಸಮಗ್ರ ರೀತಿಯಲ್ಲಿ ಜಲ ಸಂಪನ್ಮೂಲಗಳನ್ನು ಬಳಸುವ ಪ್ರಯತ್ನದಲ್ಲಿ ಈ ಕಾರ್ಯವನ್ನು ಆಯೋಜಿಸಿದೆ.
7 ನೇ ಭಾರತ ಜಲ ಸಪ್ತಾಹವನ್ನು ನವೆಂಬರ್ 1ರಿಂದ 5ರವರೆಗೆ ಆಚರಿಸಲಾಗುತ್ತದೆ. ಜಾಗತಿಕ ಮಟ್ಟದ ನಿರ್ಧಾರ ತೆಗೆದುಕೊಳ್ಳುವವರು, ರಾಜಕಾರಣಿಗಳು, ಸಂಶೋಧಕರು ಮತ್ತು ಉದ್ಯಮಿಗಳಿಂದ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಪಡೆಯಲು ವೇದಿಕೆಯನ್ನು ಬಳಸಲಾಗುತ್ತದೆ.
‘ಸುಸ್ಥಿರ ಅಭಿವೃದ್ಧಿ ಮತ್ತು ಸಮಾನತೆಗಾಗಿ ಜಲ ಭದ್ರತೆ’ ಎಂಬ ವಿಷಯವನ್ನಿಟ್ಟುಕೊಂಡು ಪ್ರಸ್ತುತ ಜಲಸಪ್ತಾಹವನ್ನು ಆಯೋಜಿಸಲಾಗಿದ್ದು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿ ಜಲಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆಯ ಸುಸ್ಥಿರತೆಯ ಸಮಸ್ಯೆಗಳ ಕುರಿತು ಈ ಸಪ್ತಾಹದಲ್ಲಿ ಚರ್ಚಿಸಲಾಗುತ್ತದೆ ಎಂದು ಮೂಲಗಳು ವರದಿ ಮಾಡಿವೆ.