ಮನೆ ಸುತ್ತಮುತ್ತ ಸೊಳ್ಳೆ, ನೊಣಗಳನ್ನು ದೂರವಿಡಲು ಈ ಸಸ್ಯಗಳನ್ನು ಬೆಳೆಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಳೆಗಾಲ ಬಂತೆಂದರೆ ಸೊಳ್ಳೆ, ನೊಣಗಳು ಮನೆಯ ಸುತ್ತ ಮುತ್ತ ಕಿರಿಕಿರಿ ಕೊಡುತ್ತಿರುತ್ತವೆ. ಈ ಋತುವಿನಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಟೈಫಾಯಿಡ್ ಬಹಳ ಬೇಗ ಬರುತ್ತದೆ. ಸೊಳ್ಳೆ, ನೊಣಗಳು ಬರದಂತೆ ಸಾಕಷ್ಟು ಮುಂಜಾಗ್ರತೆ ವಹಿಸುತ್ತೇವೆ. ಕ್ರೀಮ್, ಲೋಷನ್, ಸ್ಪ್ರೇ, ಸೊಳ್ಳೆ ಬತ್ತಿ, ಕಾಯಿಲ್‌, ಬೆಂಕಿಯ ಹೊಗೆ ಇತ್ಯಾದಿಗಳಿಂದ ಅವುಗಳನ್ನು ಓಡಿಸುವ ಕೆಲಸ ಮಾಡುತ್ತೇವೆ. ಇವು ಮಾತ್ರವಲ್ಲದೆ ಕೆಲವು ರೀತಿಯ ಗಿಡಗಳನ್ನು ಬೆಳೆಸುವುದರಿಂದ ಸೊಳ್ಳೆಗಳು ನಮ್ಮ ಮನೆಗೆ ಬರದಂತೆ ತಡೆಯಬಹುದು.

ತುಳಸಿ: ತುಳಸಿ ಸಸ್ಯವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಜೊತೆಗೆ ತುಳಸಿ ಗಿಡ ಪರಿಸರವನ್ನೂ ಶುದ್ಧಗೊಳಿಸುತ್ತದೆ. ಇದರ ಪರಿಮಳ ಸೊಳ್ಳೆ, ನೊಣಗಳನ್ನು ದೂರವಿಡುತ್ತದೆ.

ಬೇವು: ಬೇವು ಸೊಳ್ಳೆಗಳು ಮತ್ತು ಇತರ ಕೀಟಗಳನ್ನು ದೂರವಿಡುವ ಸಾಮರ್ಥ್ಯವಿರುವ ಸಸ್ಯವಾಗಿದೆ. ಇದು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಈ ಮರ, ಗಿಡವನ್ನು ಮನೆಯ ಹೊರಗೆ ನೆಟ್ಟರೆ ಸೊಳ್ಳೆಗಳು ಮನೆಗೆ ಬರುವುದು ಕಡಿಮೆಯಾಗುತ್ತದೆ. ಸೊಳ್ಳೆಗಳನ್ನು ತಡೆಗಟ್ಟಲು ಬಳಸುವ ಅನೇಕ ಪದಾರ್ಥಗಳಲ್ಲಿ ಬೇವಿನ ಪುಡಿಯನ್ನು ಸಹ ಬಳಸಲಾಗುತ್ತದೆ.

ಸಿಟ್ರೊನೆಲ್ಲಾ: ಇದು ಒಂದು ರೀತಿಯ ಪತ್ರೆ ಜಾತಿಗೆ ಸೇರಿದ ಸಸ್ಯ. ಇದರ ಪರಿಮಳ ಸೊಳ್ಳೆಗಳನ್ನು ದೂರವಿಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!