ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ವರ್ಷದಲ್ಲಿ 45 ಕೆಜಿ ತೂಕ ಇಳಿಸಿಕೊಂಡ ಫಿಟ್‌ನೆಸ್ ಇನ್‌ಫ್ಲೂಯೆನ್ಸರ್ ವಿಚಿತ್ರ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ಆನ್‌ಲೈನ್‌ನಲ್ಲಿಯೇ ಫಿಟ್‌ನೆಸ್ ಟಿಪ್ಸ್ ನೀಡುತ್ತಿದ್ದ ಬ್ರೆಜಿಲ್‌ನ ಫೇಮಸ್ ಇನ್‌ಫ್ಲುಯೆನ್ಸರ್ ಅಡ್ರಿಯಾನಾ ಥೈಸನ್ ನಿಗೂಢ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಪೋಷಕರು ಅವರ ಕಾಯಿಕೆ ಬಗ್ಗೆ ಮಾತನಾಡಲು ಇಚ್ಛಿಸಿಲ್ಲ.
ಒಂದೇ ವರ್ಷದಲ್ಲಿ ಅಷ್ಟೆಲ್ಲಾ ತೂಕ ಇಳಿಸಿಕೊಂಡಿದ್ದ ಥೈಸೆನ್ ದಪ್ಪ ಇರುವವರೂ ಸಣ್ಣ ಆಗಬಹುದು, ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬಹುದು ಎನ್ನುತ್ತಿದ್ದರು. ತಾವು ಅಷ್ಟೊಂದು ತೂಕ ಇಳಿಸಿದ್ದು ಹೇಗೆ ಎನ್ನುವ ಬಗ್ಗೆ ಸ್ಟೋರಿ ಶೇರ್ ಮಾಡುತ್ತಿದ್ದರು.
ಫಿಟ್‌ನೆಸ್‌ಗಾಗಿಯೇ ಥೈಸನ್‌ರನ್ನು ಫಾಲೋ ಮಾಡ್ತಿದ್ದ ಜನರಿಗೆ ಥೈಸನ್ ಸಾವು ಶಾಕಿಂಗ್ ಸುದ್ದಿಯಾಗಿದೆ.