July 22, 2026
Wednesday, July 22, 2026
spot_img

ಬೆಲೆ ಏರಿಕೆ ಜನವಿರೋಧಿ ನೀತಿ: ಕೇಂದ್ರ ಸರ್ಕಾರದ ವಿರುದ್ಧ ಯತೀಂದ್ರ ಕಿಡಿ

ಹೊಸದಿಗಂತ ವರದಿ ವಿಜಯಪುರ:

ಪ್ರಧಾನಿ ಮೋದಿ ಸರ್ಕಾರಕ್ಕೆ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಗ್ಯಾಸ್ ಬೆಲೆ ಏರಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಜನರು ಹೇಗಾದರೂ ಹಾಳಾಗಲಿ ಎಂದು ಬೆಲೇರಿಕೆ ಮಾಡಿದ್ದಾರೆ. ಬೆಲೇರಿಕೆಯಿಂದ ಜನತೆಗೆ ಹೊರೆ ಆಗುತ್ತದೆ. ಇದರಿಂದ ಆರ್ಥಿಕಕ್ಕೆ ಹೊಡೆತ ಬೀಳುತ್ತದೆ ಎಂದರು.

ಇದನ್ನೂ ಓದಿ:

ಆದರೆ, ಕೇಂದ್ರದಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲವೂ ಕಡಿಮೆ ಬೆಲೆ ಇತ್ತು, ನಮ್ಮ ಸರ್ಕಾರದ ಅವಧಿಯಲ್ಲಿ ಬಾಂಡ್‌ಗಳನ್ನು ಖರೀದಿ ಮಾಡಿ, ಬೆಲೆ‌ ಇಳಿಕೆ ಮಾಡಲಾಗಿತ್ತು ಎಂದರು.

ಕಾಕರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಅವಕಾಶ ಇರುತ್ತದೆ. ಒಳ್ಳೆಯ ಉದ್ದೇಶದಿಂದ ಪ್ರತಿಭಟನೆ ಮಾಡಲಿ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !