ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಾಣಸಿಯ ಅರ್ಚಕರೊಬ್ಬರು ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎನ್ನುವ ಬೇಸರಕ್ಕೆ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಅರ್ಚಕ ಅಮಿತ್ ಶರ್ಮಾ ಎಂಬುವವರು ಮನೆಯ ರೂಮಿನ ಬಾಗಿಲು ಹಾಕಿಕೊಂಡು ಸತತ 24 ಗಂಟೆಗಳ ಕಾಲ ಕಾಳಿ ದೇವಿಯನ್ನು ನಿಷ್ಠೆಯಿಂದ ಪೂಜಿಸಿದ್ದರು. ಆದರೆ ಆ ತಾಯಿ ದರ್ಶನ ಕೊಡಲಿಲ್ಲ ಎನ್ನುವ ಬೇಸರದಲ್ಲಿ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಗರದ ಗಾಯ್ ಘಾಟ್ ಪ್ರದೇಶದ ನಿವಾಸಿ ಅಮಿತ್ ಶರ್ಮಾ ಅವರು ತಮ್ಮ ಬಾಡಿಗೆ ಮನೆಯ ಅಂಗಳದಲ್ಲಿ ಕಟ್ಟರ್‌ನಿಂದ ಕತ್ತು ಸೀಳುವ ಮೊದಲು ದೇವರನ್ನು ಪ್ರಾರ್ಥಿಸಿದ್ದರು. ಆ ಸಮಯದಲ್ಲಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಪತ್ನಿಗೆ ತಾಯಿ ಕಾಳಿ ನೀನೇ ದಾರಿ ತೋರಿಸು ಎಂದು ಜೋರಾಗಿ ಕೂಗಿದ್ದರು.
ಅವರು ಮನೆಯಿಂದ ಹೊರಗೆ ಬರುವಷ್ಟರಲ್ಲಿ ನೆಲದ ಮೇಲೆ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡರು. ಕೂಡಲೇ ಅಕ್ಕಪಕ್ಕದವರನ್ನು ಕರೆದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಉಸಿರು ನಿಂತಿತ್ತು.
ಕಾಳಿ ದೇವಿಯು ತನಗೆ ಕಾಣಿಸಿಕೊಳ್ಳುತ್ತಾಳೆ ಎಂಬ ನಂಬಿಕೆಯಿಂದ ಶರ್ಮಾ ಕೊಠಡಿಯಲ್ಲಿ ಬೀಗ ಹಾಕಿಕೊಂಡು 24 ಗಂಟೆಗಳ ಕಾಲ ತೀವ್ರ ಪೂಜಾ ವಿಧಿವಿಧಾನಗಳನ್ನು ನಡೆಸುತ್ತಿದ್ದರು ಎಂದು ಜೂಲಿ ಪೊಲೀಸರಿಗೆ ತಿಳಿಸಿದ್ದಾರೆ. ಇದು ಆಗದಿದ್ದಾಗ ಆತ ಕಂಗಾಲಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆಯ ಸುತ್ತಲಿನ ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.