ಪ್ರಧಾನಿ ಅಂದರೆ ನಮ್ಮೆಲ್ಲರಿಗೆ ‘ದೊಡ್ಡಣ್ಣ’…ಗುಜರಾತ್‌ ನಂತೆ ನಮ್ಮ ರಾಜ್ಯ ಆಗಲಿ ಅಭಿವೃದ್ಧಿ: ತೆಲಂಗಾಣ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಬೃಹತ್ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ಮೋದಿ ತೆರಳಿದ್ದರು. ಈ ವೇಳೆ ತೆಲಂಗಾಣ ಮುಖ್ಯಮಂತ್ರಿ ರೇವಣ್ಣ ರೆಡ್ಡಿ ಪ್ರಧಾನಿ ಮೋದಿ ಅವರನ್ನು ‘ದೊಡ್ಡಣ್ಣ’ ಎಂದು ಕರೆದಿದ್ದು, ಎಲ್ಲೆಡೆ ಈ ವಿಡಿಯೋ ವೈರಲ್ ಆಗಿದೆ.

ಈ ಕುರಿತ ವಿಡಿಯೋ ಯನ್ನು ರಾಜ್ಯ ವಿಪಕ್ಷ ನಾಯಕ ಆರ್. ಅಶೋಕ್‌ (R Ashok) ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರಾಜ್ಯವೊಂದರ ಜವಾಬ್ದಾರಿಯುತ ಮತ್ತು ರಾಜನೀತಿವಂತ ಮುಖ್ಯಮಂತ್ರಿಯೊಬ್ಬರು ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ ಪ್ರಧಾನಿಯೊಂದಿಗೆ ನಡೆದುಕೊಳ್ಳುವ ನಿರೀಕ್ಷೆ ಹೀಗಿರಬೇಕು. ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ಅವರಿಗೆ ತೆಲಂಗಾಣ ಸಿಎಂರಿಂದ ಕಲಿಯಿರಿ ಎಂದು ಚಾಟಿ ಬೀಸಿದ್ದಾರೆ .

‘ಸಿಎಂ ಸಿದ್ದರಾಮಯ್ಯ ಅವರೇ, ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ದಯವಿಟ್ಟು ತೆಲಂಗಾಣದಲ್ಲಿನ ನಿಮ್ಮ ಕಿರಿಯ ಸಹೋದ್ಯೋಗಿಯಿಂದ ರಾಜ್ಯದ ಅಭಿವೃದ್ಧಿ ಮತ್ತು ರಾಜ್ಯದ ಜನರ ಹಿತಾಸಕ್ತಿಗಳನ್ನು ಹೇಗೆ ರಾಜಕೀಯ ದೂರ ಮಾಡಿ ಹೇಗೆ ಮಾಡಬೇಕೆಂಬುದು ಕಲಿಯಿರಿ’ ಎಂದು ಆರ್ . ಅಶೋಕ್ ಬರೆದುಕೊಂಡಿದ್ದಾರೆ.

ಪ್ರಧಾನ ಮಂತ್ರಿ ನಮ್ಮಲ್ಲರಿಗೂ ದೊಡ್ಡಣ್ಣ
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿಡಿಯೋದಲ್ಲಿ, ಹಿಂದಿಯಲ್ಲಿ ಭಾಷಣ ಮಾಡಿರುವ ರೇವಂತ್‌, “ನರೇಂದ್ರ ಮೋದಿ ಅವರು ನಮ್ಮ ದೇಶದ ಪ್ರಧಾನಿ ಅಂದರೆ ನಮ್ಮೆಲ್ಲರಿಗೆ ದೊಡ್ಡ ಅಣ್ಣನಿದ್ದಂತೆ. ಇಂತಹ ಅಣ್ಣನ ಬೆಂಬಲದಿಂದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದೇ ರೀತಿ ನನಗೂ ಬಯಕೆಯಿದೆ. ನಮ್ಮ ತೆಲಂಗಾಣ ರಾಜ್ಯದಲ್ಲಿ ಅಭಿವೃದ್ಧಿಗಳನ್ನು ಕಾಣಬೇಕು. ಗುಜರಾತ್‌ನಲ್ಲಿ ಆದಂತಹ ಬೆಳವಣಿಗೆಗಳು ನಮ್ಮ ರಾಜ್ಯದಲ್ಲೂ ಆಗಬೇಕು. ಇದಕ್ಕೆ ಪ್ರಧಾನಿ ಮೋದಿ ಅವರ ಬೆಂಬಲ ಬೇಕೇ ಬೇಕು” ಎಂದು ಹೇಳಿದ್ದಾರೆ.

ದೇಶದಲ್ಲಿ ಆರ್ಥಿಕತೆಯೂ ಪ್ರಗತಿ ಕಂಡಿದೆ. ಭಾರತದಲ್ಲಿ 5 ಮೆಟ್ರೋಪಾಲಿಟನ್ ನಗರಗಳು ಹುಟ್ಟಿಕೊಂಡಿವೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್‌ ಒಳಗೊಂಡಿದೆ. ಹೈದ್ರಾಬಾದ್‌ನಲ್ಲಿ ದೊಡ್ಡ ಮೆಟ್ರೋಪಾಲಿಟನ್ ಸಿಟಿಯಾಗಿ ಹೊರಹೊಮ್ಮಿದೆ. ದೇಶದ ಆರ್ಥಿಕತೆಯು ಪ್ರಗತಿಯತ್ತ ಸಾಗಲು ಅವರ ಕೊಡುಗೆ ಅಪಾರವಾದದ್ದು. ಅದೇ ರೀತಿ ನಮ್ಮ ತೆಲಂಗಾಣ ಅಭಿವೃದ್ಧಿಗೆ ನಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

ತೆಲಂಗಾಣದಲ್ಲಿ 56 ಸಾವಿರ ಕೋಟಿ ಬಹುಅಭಿವೃದ್ಧಿ ಯೋಜನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!