ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ನ ಪ್ಯಾರಾಲಿಂಪಿಕ್ಸ್ ಗೇಮ್ಸ್ನಲ್ಲಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಸ್ಪರ್ಧಿಗಳನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಇಂದು ಪದಕ ವಿಜೇತರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಭಿನಂದನೆ ಹೇಳಿದ್ದಾರೆ. ಮೋನಾ ಅಗರ್ವಾಲ್, ಪ್ರೀತಿ ಪಾಲ್, ಮನೀಶ್ ನರ್ವಾಲ್, ರುಬಿನಾ ಫ್ರಾನ್ಸಿಸ್ ಅವರೊಂದಿಗೆ ಪ್ರಧಾನಿಗಳು ಮಾತನಾಡಿದರು.
ಈ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಶೂಟರ್ ಆವನಿ ಲೇಖರ ಅವರು ಈ ವೇಳೆ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡಿದ್ದರಿಂದ ಪ್ರಧಾನಿಗಳ ಫೋನ್ ಸಂವಾದಕ್ಕೆ ಅವರು ಸಿಗಲಿಲ್ಲ. ಇತರ ಪ್ರತಿಯೊಬ್ಬ ವಿಜೇತರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಮೋದಿ, ಅವರು ಹೇಗೆ ತಮ್ಮ ಸಾಧನೆಗಳ ಮೂಲಕ ದೇಶಕ್ಕೆ ಹೆಮ್ಮ ಮೂಡಿಸಿದ್ದಾರೆ ಎಂಬುದನ್ನು ತಿಳಿಸಿದರು.