ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿವೃದ್ಧಿ ಹೊಂದಿದ ಕರ್ನಾಟಕ ಮತ್ತು ಅಭಿವೃದ್ಧಿ ಹೊಂದಿದ ಭಾರತ’ವನ್ನು ಸಾಕಾರಗೊಳಿಸಲು, ನೀರಿನ ಸಂರಕ್ಷಣೆ, ನೈಸರ್ಗಿಕ ಕೃಷಿ, ಫಿಟ್ನೆಸ್ ಮತ್ತು ಸೇವೆ ಸೇರಿದಂತೆ ಒಂಬತ್ತು ಸಾಮೂಹಿಕ ಪ್ರತಿಜ್ಞೆಗಳನ್ನು ಸ್ವೀಕರಿಸುವಂತೆ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಯಾವುದೀ ಒಂಬತ್ತು ಪ್ರತಿಜ್ಞೆ?
ಜಲಸಂರಕ್ಷಣೆ: ಎಲ್ಲ ಕಡೆ ನೀರು ಉಳಿಸುವುದು.
ಎಲ್ಲರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವುದು.
ಮನೆ, ಸಾರ್ವಜನಿಕ ತಾಣ ಎಲ್ಲ ಕಡೆಯೂ ಸ್ವಚ್ಛತೆ ಕಾಪಾಡುವುದು.
ಸ್ವದೇಶಿ ನಿರ್ಮಿತ ವಸ್ತುಗಳನ್ನು ಬಳಸಿ ಆತ್ಮನಿರ್ಭರತೆ ಬೆಳೆಸುವುದು.
ದೇಶದೊಳಗೆ ಪ್ರವಾಸ ಮಾಡುವುದು ಮೂಲಕ ಆ ತಾಣಗಳನ್ನು ಉತ್ತೇಜಿಸುವುದು.
ರಾಸಾಯನಿಕ ಮುಕ್ತ ಕೃಷಿಯ ಮೂಲಕ ಜನತೆಯ ಆರೋಗ್ಯ ಕಾಪಾಡುವುದು.
ಎಚ್‌ಡಿ ದೇವೇಗೌಡರು ರಾಗಿ ಮುದ್ದೆಯನ್ನು ಜನಪ್ರಿಯಗೊಳಿಸಿದರು. ಅದು ಆರೋಗ್ಯದ ಪ್ರತೀಕ. ಉತ್ತಮ ಆಹಾರದಿಂದ ಉತ್ತಮ ಚಿಂತನೆ.
ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ವ್ಯಾಯಾಮ, ಯೋಗ.
ಸೇವಾಭಾವನೆ



