Wednesday, February 21, 2024

ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಗೆ ರಾಮಮಂದಿರದ ಪ್ರತಿಕೃತಿ ನೀಡಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಾಳೆ ದೆಹಲಿಯಲ್ಲಿ ನಡೆವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲು ಆಗಮಿಸಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.

ಗುರುವಾರ ರಾಜಸ್ಥಾನದ ಜೈಪುರದಲ್ಲಿ ರಾಮಮಂದಿರ ಪ್ರತಿಕೃತಿ ನೀಡಿದರು.

ಜೈಪುರದಲ್ಲಿ ಭಾರಿ ಭದ್ರತಾ ವ್ಯವಸ್ಥೆಗಳ ನಡುವೆ ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಜಂಟಿ ರೋಡ್ ಶೋ ನಡೆಸಿದರು. ಜಂತರ್ ಮಂತರ್‌ನಲ್ಲಿ ಆರಂಭವಾದ ರೋಡ್‌ಶೋ ಹವಾ ಮಹಲ್‌ನಲ್ಲಿ ಕೊನೆಗೊಂಡಿತು. ತೆರೆದ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ನಾಯಕರು ರಸ್ತೆಬದಿಯಲ್ಲಿ ನೆರೆದಿದ್ದ ಜನರತ್ತ ಕೈ ಬೀಸಿದರು.

ಇಂದು ಮಧ್ಯಾಹ್ನ ಜೈಪುರಕ್ಕೆ ಆಗಮಿಸಿದ ಮ್ಯಾಕ್ರನ್ ಸೈವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ಬೆಟ್ಟದ ಮೇಲಿನ ಅಂಬರ್ ಅರಮನೆ ಸೇರಿದಂತೆ ಜೈಪುರದ ಸಾಂಪ್ರದಾಯಿಕ ತಾಣಗಳಿಗೆ ಭೇಟಿ ನೀಡಿದರು. ಅರಮನೆಯಲ್ಲಿ, ಮ್ಯಾಕ್ರನ್ ಭಾರತ-ಫ್ರಾನ್ಸ್ ಸ್ನೇಹವನ್ನು ಎತ್ತಿ ತೋರಿಸುವ ಫಲಕಗಳನ್ನು ಹಿಡಿದು ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಧ್ಯಕ್ಷ ಮ್ಯಾಕ್ರನ್ ಸೇರಿದಂತೆ ಫ್ರೆಂಚ್ ನಿಯೋಗವನ್ನು ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಜೈಪುರ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!