107 ವರ್ಷದ ಪಪ್ಪಮ್ಮಾಳ್‌ ರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಪ್ರಧಾನಿ ಮೋದಿ ಅವರು 107 ವರ್ಷದ ಸಾವಯವ ಕೃಷಿಕರಾಗಿರುವ ಪಪ್ಪಮ್ಮಾಳ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಜಾಗತಿಕ ಶ್ರೀಅನ್ನ ಸಮಾವೇಶದಲ್ಲಿ ಗ್ಲೋಬಲ್‌ ಮಿಲ್ಲೆಟ್ಸ್‌ ಕಾನ್ಫರೆನ್ಸ್‌ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ, ಭಾಷಣದ ಬಳಿಕ 107 ವರ್ಷದ ಪದ್ಮಶ್ರೀ ಪುರಸ್ಕೃತೆ, ಸಾವಯವ ಕೃಷಿಕ ಪಪ್ಪಮ್ಮಾಳ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.ಈ ವೇಳೆ ಪಪ್ಪಮ್ಮಾಳ್‌ ಪ್ರಧಾನಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ಕ್ಷಣ ಪ್ರೀತಿಯಿಂದಲೇ ಸನ್ಮಾನ ಸ್ವೀಕಾರ ಮಾಡಿದ ಪ್ರಧಾನಿ ಮೋದಿ, ಪಪ್ಪಮ್ಮಾಳ್‌ ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಂಡರು.

 

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪ್ರಧಾನಿ ಮೋದಿ ನಡೆಯನ್ನು ಮುಕ್ತ ಕಂಠದಿಂದ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!