ಧಾರವಾಡದಲ್ಲಿ ‘IIT’ ಗ್ರೀನ್ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಧಾರವಾಡದಲ್ಲಿ ‘IIT’ ಗ್ರೀನ್ ಕ್ಯಾಂಪಸ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.

ಧಾರವಾಡದಿಂದ 7 ಕಿಮೀ ದೂರದಲ್ಲಿರುವ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 470 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.ಹಚ್ಚ ಹಸಿರಿನಿಂದ ಕೂಡಿದ ಕ್ಯಾಂಪಸ್ ವಿದ್ಯಾಭ್ಯಾಸಕ್ಕೆ ಹೇಳಿಮಾಡಿಸಿದ ಜಾಗವಾಗಿದೆ.

ಧಾರವಾಡ ಐಐಟಿ ಕ್ಯಾಂಪಸ್ ತನ್ನದೇ ಇಂಧನ ಮತ್ತು ನೀರಿನ ವ್ಯವಸ್ಥೆ ಹೊಂದಿದೆ. ಸ್ವಾವಲಂಬಿ ಇಂಧನ ಅಂದರೆ ಸೌರಶಕ್ತಿ ಬಳಸಿ ಇಂಧನ ತರಿಸುತ್ತಾರೆ, ಈ ಕ್ಯಾಂಪಸ್ನಲ್ಲಿ ಎರಡು ಶೈಕ್ಷಣಿಕ ಬ್ಲಾಕ್ಗಳು, ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ, ಕೇಂದ್ರ ಉಪನ್ಯಾಸ ರಂಗಮಂದಿರ, ಅಧ್ಯಾಪಕರ ವಸತಿ, ವಿದ್ಯಾರ್ಥಿಗಳ ಹಾಸ್ಟೆಲ್, 700 ಆಸನ ಸಾಮರ್ಥ್ಯ ಇರುವ ಸಭಾಂಗಣ ಸೇರಿದಂತೆ 16 ಬ್ಲಾಕ್ಗಳಿವೆ. ಒಟ್ಟಾರೆ ಈಗಾಗಲೇ ವಿದ್ಯಾಕಾಶಿ ಎಂದೇ ಪ್ರಸಿದ್ಧವಾಗಿರುವ ಧಾರವಾಡದಲ್ಲಿ ಐಐಟಿ ಅಧಿಕೃತವಾಗಿ ಲೋಕಾರ್ಪಣೆಗೊಳ್ಳುತ್ತಿರುವುದು ಕರ್ನಾಟಕದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!