ಮುಂಬೈನಲ್ಲಿ ದಾವೂದಿ ಬೋಹ್ರಾ ಸಮುದಾಯದ ಅರೇಬಿಕ್ ಅಕಾಡೆಮಿ ಉದ್ಘಾಟಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮುಂಬೈನಲ್ಲಿ ದಾವೂದಿ ಬೋಹ್ರಾ ಮುಸ್ಲಿಮರ (Dawoodi Bohra Muslims) ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಇಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ದಾರೆ.

ಇಲ್ಲಿನ ಉಪನಗರ ಅಂಧೇರಿಯ ಮರೋಲ್‌ನಲ್ಲಿರುವ ಅಲ್ಜಮಿಯಾ-ತುಸ್-ಸೈಫಿಯಾ (ದಿ ಸೈಫೀ ಅಕಾಡೆಮಿ) ಹೊಸ ಕ್ಯಾಂಪಸ್‌ ಸಮುದಾಯದ ಕಲಿಕೆಯ ಸಂಪ್ರದಾಯಗಳು ಮತ್ತು ಸಾಹಿತ್ಯ ಸಂಸ್ಕೃತಿಯನ್ನು ರಕ್ಷಿಸಲು ಸಂಸ್ಥೆಯು ಕಾರ್ಯನಿರ್ವಹಿಸುತ್ತದೆ. ಅರೇಬಿಕ್ ಕಲಿಸುತ್ತದೆ.

ಇನ್ನು ಪಿಎಂ ಮೋದಿ ಸಮುದಾಯದೊಂದಿಗೆ ಆತ್ಮೀಯ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಅದರ ಧಾರ್ಮಿಕ ಮುಖಂಡರನ್ನು ಅನೇಕ ಬಾರಿ ಭೇಟಿ ಮಾಡಿದ್ದಾರೆ. ದಾವೂದಿ ಬೊಹ್ರಾ ಸಮುದಾಯವು ಶಿಯಾ ಇಸ್ಲಾಮಿಕ್ ಪಂಗಡದ ಒಳಗಿರುವ ಉಪಗುಂಪಾಗಿದ್ದು ಅದು ವ್ಯಾಪಾರ ಕುಶಾಗ್ರಮತಿಗೆ ಹೆಸರುವಾಸಿಯಾಗಿದೆ.

ಇಲ್ಲಿ ಸಮುದಾಯದ ಮುಖ್ಯಸ್ಥ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರೊಂದಿಗೆ ಕೈ ಹಿಡಿದುಕೊಂಡು ಪ್ರಧಾನಿ ಮೋದಿ ನಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!